7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಒಟ್ಟು 4 ಭತ್ಯೆಗಳ ಹೆಚ್ಚಳ!
1. ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲಾಗಿದೆ. ಇದೀಗ ಮತ್ತೆ ನೌಕರರ ತುಟ್ಟಿಭತ್ಯೆಯಲ್ಲಿ ಏರಿಕೆಯಾಗುತ್ತಿದೆ. ಇತ್ತೀಚೆಗಷ್ಟೇ ಪ್ರಕಟಗೊಂಡ ಎಐಸಿಪಿಐ ಅಂಕಿ ಅಂಶಗಳನ್ನು ಗಮನಿಸಿದರೆ, ಮತ್ತೊಮ್ಮೆ ತುಟ್ಟಿ ಭತ್ಯೆ ಶೇ.3 ರಿಂದ ಶೇ.5 ರಷ್ಟು ಹೆಚ್ಚಾಗುವುದು ಸ್ಪಷ್ಟವಾಗುತ್ತಿದೆ.
2. ಒಂದೊಮ್ಮೆ ಈ ತುಟ್ಟಿಭತ್ಯೆ ಏರಿಕೆಯಾದರೆ, ನೌಕರರ ಟ್ರಾವೆಲಿಂಗ್ ಅಲೌನ್ಸ್ ಹಾಗೂ ಸಿಟಿ ಅಲೌನ್ಸ್ ನಲ್ಲಿಯೂ ಕೂಡ ಹೆಚ್ಚಳ ಉಂಟಾಗಲಿದೆ. ಏಕೆಂದರೆ ಡಿಎ ಹೆಚ್ಚಳದ ಬಳಿಕ ಟಿಎ ಹಾಗೂ ಸಿಎ ಹೆಚ್ಚಾಗುವುದು ಬಹುತೇಕ ಖಚಿತವಾಗುತ್ತದೆ.
3. ಅಷ್ಟೇ ಅಲ್ಲ ಡಿಎ ಹೆಚ್ಚಳದ ನಂತರ ಪ್ರಾವಿಡೆಂಟ್ ಫಂಡ್ ಹಾಗೂ ಗ್ರ್ಯಾಚುಟಿಗಳ ಹೆಚ್ಚಳ ಕೂಡ ಬಹುತೇಕ ಖಚಿತವಾಗುತ್ತದೆ. ಏಕೆಂದರೆ, ಕೇಂದ್ರ ಸರ್ಕಾರಿ ನೌಕರರ ಮಾಸಿಕ ಪಿಎಫ್ ಹಾಗೂ ಗ್ರ್ಯಾಚುಟಿಗಳು ಅವರ ಒಟ್ಟು ಮೂಲ ವೇತನ ಮತ್ತು ಡಿಎಯನ್ನು ಆಧರಿಸಿರುತ್ತದೆ. ಹೀಗಿರುವಾಗ ತುಟ್ಟಿಭತ್ಯೆ ಹೆಚ್ಚಳದ ಬಳಿಕ ಪಿಎಫ್ ಹಾಗೂ ಗ್ರ್ಯಾಚುಟಿ ಹೆಚ್ಚಳ ಬಹುತೇಕ ಖಚಿತವಾಗಿದೆ. ಜುಲೈ ತಿಂಗಳಿಗೂ ಮುನ್ನವೇ ಇವುಗಳು ಹೆಚ್ಚಾಗಲಿವೆ ಎನ್ನಲಾಗಿದೆ.
4. ಇನ್ನೊಂದೆಡೆ ಕೇಂದ್ರ ಸರ್ಕಾರಿ ನೌಕರರ ಸಂಘಟನೆ ಸರ್ಕಾರದ ಮೇಲೆ ಬಾಕಿ ಉಳಿದಿರುವ 18 ತಿಂಗಳ ಡಿಎ ಪಾವತಿಯ ಕುರಿತು ಕೂಡ ಒತ್ತಡವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ. ವೇತನ ಹಾಗೂ ಭತ್ಯೆಗಳು ಸರ್ಕಾರಿ ನೌಕರರ ಹಕ್ಕಾಗಿವೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದು ನೌಕರರು ವಾದಿಸಿದ್ದಾರೆ. ಹೀಗಾಗಿ 18 ತಿಂಗಳ ಅರಿಯರ್ ಲಾಭ ಕೂಡ ಸಿಗುವ ನಿರೀಕ್ಷೆ ಇದೆ.
5. ಡಿಎ ಹೆಚ್ಚಾಗುವುದರಿಂದ ನೌಕರರ ಮನೆ ಬಾಡಿಗೆ ಭತ್ಯೆ ಮತ್ತು ಟ್ರಾವೆಲ್ ಅಲೌನ್ಸ್ ಕೂಡ ಹೆಚ್ಚಾಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಒಟ್ಟು ನಾಲ್ಕು ಭತ್ಯೆಗಳಲ್ಲಿ ಹೆಚ್ಚಳದ ಲಾಭ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಕಳೆದ ಒಂಬತ್ತು ತಿಂಗಳಲ್ಲಿ ಡಬಲ್ ಆಗಿದೆ. ಇದೀಗ ಜುಲೈ ತಿಂಗಳಿನಲ್ಲಿ ಮತ್ತೆ ಡಿಎ ಏರಿಕೆಯಾಗುವ ಸಾಧ್ಯತೆ ಇದೆ.