7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್. ತುಟ್ಟಿ ಭತ್ಯೆ ಶೇ. 4 ರಷ್ಟು ಹೆಚ್ಚಳ. ಏರಿಕೆಯಾಗಲಿದೆ ವೇತನ, ಪಿಂಚಣಿ

Mon, 18 Jan 2021-12:55 pm,

ಮಾಧ್ಯಮ ವರದಿಗಳ ಪ್ರಕಾರ ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯಲ್ಲಿ ಶೇ. 4 ರಷ್ಟು ಏರಿಕೆ ಮಾಡಿದೆ.  ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನ  ಏರಿಕೆಯಾಗಲಿದೆ. ಈ ಏರಿಕೆಯಿಂದಾಗಿ ತುಟ್ಟಿ ಭತ್ಯೆ  ಶೇ. 17ರಿಂದ ಶೇ. 21 ಕ್ಕೆ ಏರಿಕೆಯಾಗಲಿದೆ.  ಈ ಭತ್ಯೆ ಜನವರಿಯಿಂದಲೇ ಪೂರ್ವಾನ್ವಯವಾಗಲಿದೆ. ಆದರೆ, ಇದರ ಔಪಚಾರಿಕ ಘೋಷಣೆ ಇನ್ನಷ್ಟೇ ಆಗಬೇಕಿದೆ.  ವೇತನದಾರರು ಮತ್ತು ಪಿಂಚಣಿದಾರರು ಈ  ಘೋಷಣೆಗಾಗಿ ಕಾಯುತ್ತಿದ್ದಾರೆ. 

ಜ. 1 2020ರಿಂದ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರ  ತುಟ್ಟಿಭತ್ಯೆ ಮತ್ತು ತುಟ್ಟಿ ಭತ್ಯ ಪರಿಹಾರದ ಹೆಚ್ಚುವರಿ ಕಂತನ್ನು  ಜ.1,, 2020 ರಿಂದಲೇ ಜಾರಿಗೆ ತರಲು ಕೇಂದ್ರ ಸಂಪುಟ ಅನುಮತಿ ನೀಡಿತ್ತು. ಮೂಲ ವೇತನ ಮತ್ತು ಪಿಂಚಣೆ ಮೇಲೆ ಶೇ. 4 ರಷ್ಟು ಏರಿಕೆ ನೀಡಲಾಗುವುದು ಎಂದು ಆವಾಗಲೇ ಹಣಕಾಸು ಸಚಿವರು ಘೋಷಣೆ ಮಾಡಿದ್ದರು. 

ಆದರೆ, ಕರೋನಮಹಾಮಾರಿ ಕಾರಣದಿಂದಾಗಿ ಕೇಂದ್ರ ಸರ್ಕಾರಿ ನೌಕರರು  ಮತ್ತು ಪಿಂಚಣಿದಾರರಿಗೆ ಸಿಗಬೇಕಿದ್ದ ಹೆಚ್ಚುವರಿ ಸೌಲಭ್ಯಗಳಿಗೆ ಬ್ರೇಕ್ ಬಿದ್ದಿತ್ತು. ಜುಲೈ 1, 2020 ಮತ್ತು ಜನವರಿ 2021ರ ಹೊತ್ತಿಗೆ ನೀಡಲಾಗುವ ಭತ್ಯೆಗಳಿಗೆ ಕೂಡಾ ಬ್ರೇಕ್ ಹಾಕಲಾಗಿದೆ ಎಂದು ವಿತ್ತ ಸಚಿವಾಲಯ ಹೇಳಿತ್ತು. ಆದರೆ, ಡಿಎ, ಡಿಆರ್ ಇದೀಗ ನೌಕರರಿಗೆ ಸಿಗಲಿದೆ. 

ಆದರೆ, ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ನೌಕರರ ಮಹಾ ಒಕ್ಕೂಟ (Association of Employees Confederation of Central Government Employees and Workers), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬೇಡಿಕೆ ಸಲ್ಲಿಸಿದೆ. ಅದರಲ್ಲಿ ಡಿಎ ಮತ್ತು ಡಿಆರ್ ನ್ನು ಶೇ. 28 ರಷ್ಟು ಏರಿಕೆ ಮಾಡಬೇಕು ಎಂದು ಒತ್ತಾಯಿಸಿದೆ. ಕರೋನಾ ಮಹಾಮಾರಿ ಸಂದರ್ಭದಲ್ಲಿ ಸರ್ಕಾರಿ ನೌಕರರು ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದರು. ಕೆಲವರು ಆ ಹೊತ್ತಿನಲ್ಲಿ ಪ್ರಾಣ ಕೂಡಾ ಕಳೆದುಕೊಂಡಿದ್ದರು.  ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನೌಕರರಿಗೆ ಡಿಎ, ಡಿಆರ್ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದೆ.   

ಮಾಧ್ಯಮ ವರದಿಗಳ ಪ್ರಕಾರ ಡಿಎ ಡಿಆರ್ ಸ್ಥಗಿತಗೊಳಿಸಿದ್ದರಿಮದ 2021-22ರ ವಿತ್ತ ವರ್ಷದಲ್ಲಿ 37,530 ಕೋಟಿ ಉಳಿತಾಯವಾಗಿದೆ.  ಕೇಂದ್ರ ಸರ್ಕಾರದ ನಿರ್ಧಾರವನ್ನು ನೋಡಿಕೊಂಡೇ ರಾಜ್ಯ ಸರ್ಕಾರ ಕೂಡಾ ತನ್ನ ನೌಕರರ ಡಿಎ, ಡಿಆರ್ ನಿರ್ಧಾರ ಮಾಡಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link