7th Pay Commission : ಹೋಳಿಗೂ ಮುನ್ನ ಸರ್ಕಾರಿ ನೌಕರರ ಪಾಲಿಗೆ ಸಿಹಿ ಸುದ್ದಿ
ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ವರದಿಗಳ ಆಧಾರದ ಮೇಲೆ, ಹೇಳುವುದಾದರೆ ಶೀಘ್ರದಲ್ಲೇ ಘೋಷಣೆ ಮಾಡಬಹುದು . ಈ ಮಧ್ಯೆ, ಕೆಲವು ರಾಜ್ಯ ಸರ್ಕಾರಗಳು ನೌಕರರ ವೇತನ ಹೆಚ್ಚಳದ ನಿಲುವನ್ನು ಸ್ಪಷ್ಟಪಡಿಸಿವೆ.
ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಕುರಿತು ಸರ್ಕಾರದಿಂದ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಬಹುದು. ಮಾಧ್ಯಮ ವರದಿಗಳ ಪ್ರಕಾರ, ಫಿಟ್‌ಮೆಂಟ್ ಅಂಶದಲ್ಲಿನ ಬದಲಾವಣೆಯಿಂದಾಗಿ, ಉದ್ಯೋಗಿಗಳ ಕನಿಷ್ಠ ವೇತನವು ಹೆಚ್ಚಾಗುತ್ತದೆ. ಫಿಟ್‌ಮೆಂಟ್ ಅಂಶವನ್ನು 2.57 ರಿಂದ 3.68 ಕ್ಕೆ ಹೆಚ್ಚಿಸಬೇಕೆಂದು ಹಲವಾರು ನೌಕರರ ಸಂಘಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಮೂಲಗಳ ಪ್ರಕಾರ, ಬಾಕಿ ಉಳಿದಿರುವ 2 ಲಕ್ಷದವರೆಗೆ ತುಟ್ಟಿ ಭತ್ಯೆಯನ್ನು ಒಂದೇ ಬಾರಿ ನೌಕರರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಹೀಗಾದರೆ ನೌಕರರ ಖಾತೆಗೆ 18 ತಿಂಗಳ ಬಾಕಿ ಡಿಎ ಬರಲಿದೆ.
ಸರ್ಕಾರದ ಪರವಾಗಿ ನೌಕರರ ಫಿಟ್‌ಮೆಂಟ್ ಅಂಶವನ್ನು ಶೇಕಡಾ 2.57 ರಿಂದ 3.68 ಕ್ಕೆ ಹೆಚ್ಚಿಸಿದರೆ, ಮೂಲ ವೇತನದಲ್ಲಿಯೂ ಹೆಚ್ಚಳವಾದಂತಾಗುತ್ತದೆ. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದ ನಂತರ, ಉದ್ಯೋಗಿಗಳ ಕನಿಷ್ಠ ವೇತನವು 18000 ರೂ.ಗಳಿಂದ 26000 ರೂ.ಗೆ ಏರಿಕೆಯಾಗಲಿದೆ.
ಕೇಂದ್ರ ನೌಕರರ ಡಿಎಯನ್ನು ಸರ್ಕಾರವು 3% ರಿಂದ 34% ಕ್ಕೆ ಹೆಚ್ಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಹೋಳಿಗೂ ಮುನ್ನ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಬಹುದಾಗಿದೆ. ಒಡಿಶಾ ರಾಜ್ಯ ಸರ್ಕಾರವು ನೌಕರರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಿದೆ.