7th Pay Commission: Budget 2021ನಲ್ಲಿ ಸಿಗಲಿದೆಯೇ ನೌಕರರಿಗೆ ಈ ಸಂತಸದ ಸುದ್ದಿ!

Sun, 31 Jan 2021-11:16 am,

ಇನ್ನೇನು ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ, ಕೇಂದ್ರ ನೌಕರರು ತಮ್ಮ ಸ್ಥಗಿತಗೊಂಡ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಹಾಗೂ ಅವರ ಸಂಬಳ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ. ಶೇ.21 ಅಥವಾ ಶೇ.25ರ ಬದಲಾಗಿ ನೇರವಾಗಿ ತುಟ್ಟಿಭತ್ಯೆಯನ್ನು ಶೇ.28ರಷ್ಟು ನಿರ್ಧರಿಸಬೇಕು ಎಂಬ ಬೇಡಿಕೆಗಳೂ ಕೂಡ ಇದೆ.

ಕಳೆದ ವರ್ಷ ಕೊರೊನಾ ಮಹಾಮಾರಿಯ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗಿತ್ತು. ಸರ್ಕಾರವು ಜುಲೈನಿಂದ ಡಿಸೆಂಬರ್ 2020 ರವರೆಗೆ 4% ಡಿಎ ಕಡಿತವನ್ನು ಪುನಃ ಪರಿಚಯಿಸಲು ಪ್ರಾರಂಭಿಸಿದರೆ ಮತ್ತು 2021 ರ ಜನವರಿಯಿಂದ ಜೂನ್ ವರೆಗೆ 4% ರಷ್ಟು ಪ್ರಿಯ ಭತ್ಯೆಯನ್ನು ಹೆಚ್ಚಿಸಿದರೆ, ಕೇಂದ್ರ ನೌಕರರ ತುಟ್ಟಿಭತ್ಯೆ (DA) ನೇರವಾಗಿ ಶೇ.8 ರಷ್ಟು ಏರಿಕೆಯಾಗಲಿದೆ. ಅಂದರೆ ನೌಕರರಿಗೆ ಪ್ರಸ್ತುತ ಶೇ.17ರಷ್ಟು ತುಟ್ಟಿಭತ್ಯೆ (Dearness Allowance) ಸಿಗುತ್ತಿದ್ದರೆ, ಅದು ನೇರವಾಗಿ ಏರಿಕೆಯಾಗಿ ಶೇ.25 ರಾಷ್ತಾಗಲಿದೆ. ಇದರರ್ಥ ಕೇಂದ್ರ ನೌಕರರ ವೇತನ ಮತ್ತು ಪಿಂಚಣಿದಾರರು ಪಡೆಯುವ ಪಿಂಚಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಲಿದೆ.

ತುಟ್ಟಿಭತ್ಯೆಯ ಹೊರತಾಗಿ ಕೇಂದ್ರ ಸರ್ಕಾರಿ ನೌಕರರ ಲೀವ್ ಟ್ರಾವೆಲ್ ಅಲೌನ್ಸ್ (Leave Travel Allowance). LTA ಕೂಡ ಕೇಂದ್ರ ಸರ್ಕಾರಿ ನೌಕರರ CTC (Cost To Company)ಯ ಒಂದು ಭಾಗವಾಗಿದೆ. ಆದಾಯ ತೆರಿಗೆ ನಿಯಮಗಳ (Income Tax Act) ಅಡಿ ಕೇಂದ್ರ ಸರ್ಕಾರಿ ನೌಕರರು ದೇಶದ ಯಾವುದೇ ಭಾಗದಲ್ಲಿ ಕೈಗೊಂಡ ಯಾತ್ರೆ ಖರ್ಚನ್ನು ಕ್ಲೇಮ್ ಮಾಡಬಹುದು. ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿಯ ಬಜೆಟ್ ನಲ್ಲಿ ಹೊಸ TAX System ಗೆ ಉತ್ತೇಜನ ನೀಡುವ ಉದ್ದೇಶದಿಂದ LTA ಹೆಚ್ಚಾಗುವ ಶಾಧ್ಯತೆ ಇದೆ. ಇದೊಂದು ವೇಳೆ ಏರಿಕೆಯಾದರೆ, ಇದರ ನೇರ ಲಾಭ ನೌಕರರಿಗೆ ಸಿಗಲಿದೆ.

ಉಳಿದೆಲ್ಲ ಭತ್ಯೆಗಳಂತೆ ಕೇಂದ್ರ ಸರ್ಕಾರಿ ನೌಕರರಿಗೆ ಗ್ರ್ಯಾಚ್ಯುಟಿ ಲಾಭ ಸಿಗುತ್ತದೆ. ಇದರ ಲಾಭ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ನೌಕರರಿಗೂ ಸಿಗುತ್ತದೆ. 2016 ರಸ್ಲ್ಲಿ ಸುಮಾರು 20 ಲಕ್ಷ ರೂ.ಗಳವರೆಗಿನ Gratuity ಅನ್ನ್ನು ಕರಮುಕ್ತಗೊಳಿಸಲಾಗಿದೆ.  ಆದರೆ ಈ ಬಾರಿಯ ಬಜೆಟ್ ನಲ್ಲಿ ಇದರ ಮಿತಿ 25 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಕಳೆದ ವರ್ಷ ಅಂಗೀಕರಿಸಲಾಗಿರುವ ಮೂರು ವೇತನ ಕೋಡ್ ಮಸೂದೆಗಳು ಈ ವರ್ಷದ ಏಪ್ರಿಲ್ 1 ರಿಂದ ಜಾರಿಗೆ ತರಬಹುದು. ಅದರ ಅನುಷ್ಠಾನ ಭತ್ಯೆ ಒಟ್ಟು ವೇತನದ 50% ಆಗಿರುತ್ತದೆ, ಆದರೆ ಮೂಲ ವೇತನ ಹೆಚ್ಚಳವು ಭವಿಷ್ಯ ನಿಧಿಯನ್ನು ಹೆಚ್ಚಿಸುತ್ತದೆ, ಆದರೆ ಇದು ಕೈಗೆ ಸಿಗುವ ಸಂಬಳ ಕಡಿಮೆ ಮಾಡುತ್ತದೆ ಎಂದು ವರದಿಗಳು ಹೇಳುತ್ತವೆ. ಗ್ರ್ಯಾಚುಟಿ ಮತ್ತು ಭವಿಷ್ಯ ನಿಧಿಗೆ ಕೊಡುಗೆ ಹೆಚ್ಚಳವು ನಿವೃತ್ತಿಯ ನಂತರ ಪಡೆದ ಮೊತ್ತವನ್ನು ಹೆಚ್ಚಿಸುತ್ತದೆ ಎಂಬುದು ಇಲ್ಲಿ ವಿಶೇಷ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link