7th pay commission : DA ಹೆಚ್ಚಳದೊಂದಿಗೆ ವೇತನವು ಹೆಚ್ಚಳ , ಈ ತಾರೀಕಿನಿಂದ ಸಿಗಲಿದೆ ಲಾಭ
. ಕರೋನಾದಿಂದಾಗಿ ಕೇಂದ್ರ ಉದ್ಯೋಗಿಗಳಿಗೆ 2020 ರ ಜನವರಿಯಿಂದ ಜುಲೈವರೆಗೆ (ಶೇ 3) ಮತ್ತು ಜುಲೈನಿಂದ ಡಿಸೆಂಬರ್ 2020 ರವರೆಗೆ (ಶೇ 4) ತುಟ್ಟಿ ಭತ್ಯೆ ಸಿಗಲಿಲ್ಲ. ಈಗ 2021 ರ ಜನವರಿಯಿಂದ ಜುಲೈವರೆಗಿನ ತುಟ್ಟಿ ಭತ್ಯೆಯನ್ನು ಘೋಷಿಸಬೇಕಾಗಿದ್ದು, ಅದು ಶೇಕಡಾ 4 ರಷ್ಟು ಆಗಿರಬಹುದು. ಒಟ್ಟಾರೆಯಾಗಿ, ಕೇಂದ್ರ ಉದ್ಯೋಗಿಗಳು ಇಲ್ಲಿವರೆಗೆ 17 ಪ್ರತಿಶತ ಡಿಎ ಪಡೆಯುತ್ತಿದ್ದು ಇನ್ನು ಇದು 28 ಪ್ರತಿಶತದವರೆಗೆ ಏರಬಹುದು ಎನ್ನಲಾಗಿದೆ.
ಡಿಎ ಹೆಚ್ಚಳ ಘೋಷಣೆಯಾದ ತಕ್ಷಣ, ಅದು ನಿಮ್ಮ ಸಂಬಳದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆ. ನಿಯಮಗಳ ಪ್ರಕಾರ, ಪಿಎಫ್ ಮತ್ತು ಗ್ರ್ಯಾಚುಟಿ ಅನ್ನು ಮೂಲ ವೇತನಕ್ಕೆ ಅನುಗುಣವಾಗಿ ಕಡಿತಗೊಳಿಸಲಾಗುತ್ತದೆ. ಹೊಸ ವೇತನ ಸಂಹಿತೆಯ ಪ್ರಕಾರ ಸಿಟಿಸಿಯಲ್ಲಿ ಮೂಲ ವೇತನವು ಶೇಕಡಾ 50 ಕ್ಕಿಂತ ಕಡಿಮೆಯಿರಬಾರದು.
ಡಿಎ ಹೆಚ್ಚಳ ಘೋಷಣೆಯೊಂದಿಗೆ ಪಿಂಚಣಿದಾರರಿಗೂ ಅನುಕೂಲವಾಗಲಿದೆ. ಒಂದು ವೇಳೆ ಡಿಎ ಅನ್ನು 28 ಪ್ರತಿಶತದಷ್ಟು ಹೆಚಿಸಿದ್ರೆ ಡಿಎ ಯಲ್ಲಿ ಭಾರಿ ಹೆಚ್ಚಳವಾದಂತೆ. ಡಿಎ ಅಡಿಯಲ್ಲಿ ಪಿಂಚಣಿದಾರರಿಗೆ 10 ಸಾವಿರ ರೂಪಾಯಿ ಸಿಗುತ್ತಿದ್ದರೆ ಇದು 16 ಸಾವಿರಕ್ಕೆ ಏರಿಕೆಯಾಗಬಹುದು.
ಹೊಸ ಹಣಕಾಸು ವರ್ಷದ ಪ್ರಾರಂಭದೊಂದಿಗೆ, ಹೊಸ ಕಾರ್ಮಿಕ ಕಾನೂನು ಸಹ ಅನ್ವಯಿಸಬಹುದು. ಹೊಸ ಕಾರ್ಮಿಕ ಕಾನೂನುಗಳನ್ನು ಸಂಸತ್ತು ಅಂಗೀಕರಿಸಬಹುದು ಮತ್ತು ಮೋದಿ ಸರ್ಕಾರ ಏಪ್ರಿಲ್ 1 ರಿಂದ ಅವುಗಳನ್ನು ಜಾರಿಗೆ ತರಲಿದೆ. ಇದು ನಿಮ್ಮ ಟೇಕ್ ಹೋಮ್ ಸಂಬಳದ ಮೇಲೆ ಪರಿಣಾಮ ಬೀರುತ್ತದೆ.