7th pay commission : ಸರ್ಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ..!
ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ (Information Technology Department) ಖಾಲಿ ಇರುವ ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಯುಪಿಎಸ್‌ಸಿ (UPSC) ಅರ್ಜಿ ಆಹ್ವಾನಿಸಿದೆ. ಒಟ್ಟು 116 ಹುದ್ದೆಗಳು ಖಾಲಿ ಇವೆ.
ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನಾಂಕವಾಗಿದೆ.
ಯುಪಿಎಸ್‌ಸಿ ಪರಿಶಿಷ್ಟ ಜಾತಿಗಾಗಿ 20 ಸ್ಥಾನಗಳನ್ನು ಕಾಯ್ದಿರಿಸಿದೆ. ಪರಿಶಿಷ್ಟ ಪಂಗಡಕ್ಕೆ 9, ಒಬಿಸಿಗೆ 22, EWSಗೆ 12 ಹುದ್ದೆಗಳನ್ನು ಮೀಸಲಿಡಲಾಗಿದೆ. EWS ಅಂದರೆ ಆರ್ಥಿಕವಾಗಿ ದುರ್ಬಲವಾಗಿರುವವರು. ಇನ್ನು 52 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಇದಲ್ಲದೆ ಯುಪಿಎಸ್‌ಸಿ ಅಂಗವಿಕಲ ವಿಭಾಗದ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ನೀಡಲಾಗಿದೆ.
ಈ ಹುದ್ದೆಗೆ 7 ನೇ ವೇತನ ಆಯೋಗದ ಆಧಾರದ ಮೇಲೆ ವೇತನ ನಿಗದಿಪಡಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 44,900 ರೂ.ಗಳಿಂದ 1,42,000 ರೂ.ವರೆಗೆ ಇರಲಿದೆ. ಇದರ ಹೊರತಾಗಿ ಇನ್ನೂ ಅನೇಕ ಭತ್ಯೆಗಳೂ ಸಿಗುತ್ತವೆ.
ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. 30 ವರ್ಷದೊಳಗಿವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ ಹೀಗಿದೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಂಪ್ಯೂಟರ್ ಅಪ್ಲಿಕೇಶನ್‌ಗಳು , ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿಬೇಕು. ಕಂಪ್ಯೂಟರ್ ಎಂಜಿನಿಯರಿಂಗ್ , ಕಂಪ್ಯೂಟರ್ ಸೈನ್ಸ್ , ಕಂಪ್ಯೂಟರ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ , ಇನ್ಫಾರ್ಮೇಶನ್ ವಿಷಯದಲ್ಲಿ ಬಿ.ಇ / ಬಿ.ಟೆಕ್ ಪದವಿ ಪಡೆದಿರಬೇಕು..