7th Pay Commission: Pension ನಿಯಮದಲ್ಲಿ ಭಾರಿ ಬದಲಾವಣೆ, ನಿಮ್ಮ ಮೇಲೇನು ಪ್ರಭಾವ
ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗಾಗಿ ಕೇಂದ್ರದ ಮೋದಿ ನೇತೃತ್ವದ (Modi Government) ಸರ್ಕಾರ ಕೇಂದ್ರ ದೊಡ್ಡ ಘೋಷಣೆಯೊಂದನ್ನು ಮಾಡಿದೆ. ಸರ್ಕಾರಿ ನೌಕರನ ಮರಣದ ನಂತರ, ಅವರ ಕುಟುಂಬವು ಇದೀಗ ಗರಿಷ್ಠ 1.25 ಲಕ್ಷ ರೂ.ಗಳನ್ನು ಪಿಂಚಣಿಯಾಗಿ ಪಡೆಯಲು ಸಾಧ್ಯವಾಗಲಿದೆ.
ಇದುವರೆಗೆ ಈ ಮಿತಿ ಗರಿಷ್ಠ 45 ಸಾವಿರ ರೂಪಾಯಿಗಳಾಗಿದ್ದು, ಇದನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Dr.Jitendra Singh) ಘೋಷಿಸಿದ್ದಾರೆ. ಈ ಬದಲಾವಣೆಯು ಹಣದುಬ್ಬರ ಕಾಲದಲ್ಲಿ ಮನೆ ನಡೆಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದ ಸಾವಿರಾರು ಸರ್ಕಾರಿ ನೌಕರರ ಕುಟುಂಬಕ್ಕೆ ಪ್ರಯೋಜನ ನೀಡಲಿದೆ. ಹೊಸ ನಿಯಮಗಳ ಪ್ರಕಾರ, ಅವರ ಪಿಂಚಣಿ ಪುನಶ್ಚೇತನಗೊಂಡಾಗ, ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರಕಾರ , ಸರ್ಕಾರಿ ನೌಕರನ ಮರಣದ ನಂತರ, ಮನೆಯ ಸದಸ್ಯರೊಬ್ಬರು ಅಂಗವಿಕಲರಾಗಿದ್ದರೆ ಮತ್ತು ಅವರ ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲದಿದ್ದರೆ, ಅವರಿಗೆ ಜೀವಮಾನದ ಪಿಂಚಣಿ ನೀಡಲಾಗುತ್ತದೆ. ಮೋದಿ ಸರ್ಕಾರದ ಈ ನಿರ್ಧಾರವು ಹೆತ್ತವರ ಮರಣದ ನಂತರ ತೀವ್ರ ಸಂಕಷ್ಟದಲ್ಲಿ ಬದುಕುತ್ತಿರುವ ಸಾವಿರಾರು ಜನರಿಗೆ ಭಾರಿ ನೆಮ್ಮದಿ ನೀಡಲಿದೆ.
ಈ ಬದಲಾವಣೆಯ ಮೊದಲು, ಮೋದಿ ಸರ್ಕಾರವು ಅನೇಕ ಬಾರಿ ಸಭೆಗಳನ್ನು ನಡೆಸಿದೆ ಮತ್ತು ಪ್ರಸ್ತುತ ವ್ಯವಸ್ಥೆಯು ಸಾವಿರಾರು ಜನರ ಮುಂದೆ ಇರುವ ಊಟದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬುದನ್ನು ಕಂಡುಕೊಂಡಿದೆ ಮತ್ತು ಅದು ಸರಿಯಲ್ಲ ಎಂಬ ನಿರ್ಣಯಕ್ಕೆ ಬಂದು ತಲುಪಿದೆ. ಇದಲ್ಲದೆ, ಕೇಂದ್ರ ನಾಗರಿಕ ಸೇವಾ ಪಿಂಚಣಿ ನಿಯಮಗಳು 1972 (54/6) ಪ್ರಕಾರ, ಸರ್ಕಾರಿ ನೌಕರನ ಅವಲಂಬಿತ ಕುಟುಂಬದ ಒಟ್ಟು ಆದಾಯವು ನೌಕರನ ಅಂತಿಮ ವೇತನದ 30 ಪ್ರತಿಶತಕ್ಕಿಂತ ಕಡಿಮೆಯಿದ್ದರೆ, ಮೃತ ಅವಲಂಬಿತರಿಗೆ ಜೀವನೋಪಾಯಕ್ಕಾಗಿ ಪಿಂಚಣಿ (Pension) ಪಡೆಯುವ ಎಲ್ಲಾ ಹಕ್ಕು ಇದೆ ಎಂಬ ತೀರ್ಮಾನ ಕೈಗೊಂಡಿದೆ. ಎಲ್ಲಾ ಚರ್ಚೆಗಳ ನಂತರ ಮೋದಿ ಸರ್ಕಾರ ಈಗಿರುವ ವ್ಯವಸ್ಥೆಯನ್ನುಬದಲಾಯಿಸಿದ್ದು, ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು, ಇದು ಸಾವಿರಾರು ಜನರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಲಿದೆ.