7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ನ್ಯೂಸ್, ಈ 4 ಭತ್ಯೆಗಳ ಏರಿಕೆ ಗ್ಯಾರಂಟಿ! ವೇತನದಲ್ಲಿ ಬಂಪರ್ ಹೆಚ್ಚಳ
1. ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್ - ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳದ ನಂತರ ಇದೀಗ ಇತರ ಭತ್ಯೆಗಳಲ್ಲಿಯೂ ಕೂಡ ಏರಿಕೆಯಾಗಲಿದೆ. ಮುಂದಿನ ತಿಂಗಳು ನೌಕರರ ವೇತನದಲ್ಲಿ ಈ ಏರಿಕೆಯಾಗಲಿದೆ ಎನ್ನಲಾಗಿದ್ದು, ಇದರ ಜೊತೆಗೆ 3 ತಿಂಗಳ ಅರಿಯರ್ ಕೂಡ ಸಿಗಲಿದೆ.
2. TA ಹಾಗೂ CAಯಲ್ಲಿಯೂ ಕೂಡ ಹೆಚ್ಚಳ - ತುಟ್ಟಿ ಭತ್ಯೆ ಏರಿಕೆಯ ನಂತರ ಕೇಂದ್ರ ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಹಾಗೂ ನಗರ ಭತ್ಯೆ ಕೂಡ ಏರಿಕೆಯಾಗಲಿದೆ. ಏಕೆಂದರೆ, DA ಹೆಚ್ಚಳದ ನಂತರ TA ಹಾಗೂ CA ಹೆಚ್ಚಳದ ದಾರಿ ಕೂಡ ಸುಗಮವಾಗಲಿದೆ.
3. ಗ್ರ್ಯಾಚ್ಯುಟಿ ಹೆಚ್ಚಾಗಲಿದೆ - ಇದಾದ ಬಳಿಕ ಪ್ರಾವಿಡೆಂಟ್ ಫಂಡ್ ಹಾಗೂ ಗ್ರ್ಯಾಚ್ಯುಟಿಗಳಲ್ಲಿಯೂ ಕೂಡ ಏರಿಕೆಯಾಗಲಿದೆ. ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ಹಾಗೂ ಡಿಎ ಆಧಾರದ ಮೇಲೆ ಗ್ರ್ಯಾಚುಟಿಯನ್ನು ಲೆಕ್ಕ ಹಾಕಲಾಗುತ್ತದೆ. ಹೀಗಿರುವಾಗ ತುಟ್ಟಿಭತ್ಯೆ ಹೆಚ್ಚಳದಿಂದ ಪಿಎಫ್ ಹಾಗೂ ಗ್ರ್ಯಾಚ್ಯುಟಿಗಳು ಕೂಡ ಹೆಚ್ಚಾಗಲಿವೆ.
4. ಸರ್ಕಾರಿ ನೌಕರರಿಗೆ ಡಬಲ್ ಲಾಭ -DA ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಹಾಗೂ ಹೌಸ್ ಅಲೌಂಸ್ ಹೆಚ್ಚಳ ಕೂಡ ನಿರೀಕ್ಷಿಸಬಹುದು. ಸರ್ಕಾರಿ ನೌಕರರ DA ಕೇವಲ 9 ತಿಂಗಳಲ್ಲಿ ಡಬಲ್ ಆಗಿದೆ. ಇದಲ್ಲದೆ ಪಿಂಚಣಿದಾರರಿಗೂ ಕೂಡ ಶೇ.34ರಷ್ಟು ತುಟ್ಟಿಭತ್ಯೆ ಲಭಿಸಲಿದೆ.
5. ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದೆ - ಕೇಂದ್ರ ಸರ್ಕಾರದ ಈ ಘೋಷಣೆಯ ಬಳಿಕ ಸುಮಾರು 50 ಲಕ್ಷ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಲಾಭ ಸಿಗಲಿದೆ. ಆದರೆ, ಇನ್ನೊಂದೆಡೆ ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 9455.50 ಕೋಟಿ ರೂ.ಗಳ ಆರ್ಥಿಕ ಹೊರೆ ಬೀಳಲಿದೆ. ಇದರ ಹೊರತಾಗಿ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಕೊರೊನಾ ಕಾಲದ 18 ತಿಂಗಳ ಬಾಕಿ ಇರುವ ಡಿಎ ಪಾವತಿಗೂ ಕೂಡ ಒತ್ತಡ ಹೆಚ್ಚಿಸುತ್ತಿವೆ. ವೇತನ ಹಾಗೂ ಭತ್ಯೆಗಳು ಸರ್ಕಾರಿ ನೌಕರರ ಹಕ್ಕುಗಳಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯ ಕೂಡ ಹೇಳಿದೆ ಎಂದು ನೌಕರರು ವಾದಿಸಿದ್ದಾರೆ.