7th Pay Commission: ಸರ್ಕಾರಿ ನೌಕರರ ವೇತನ ವೃದ್ಧಿ, ಶೀಘ್ರವೇ ಘೋಷಣೆ ಸಾಧ್ಯತೆ
12 ಅಕ್ಟೋಬರ್ 2020 ರಂದು ಈ ಯೋಜನೆಯನ್ನು ಘೋಷಿಸಲಾಗಿತ್ತು. ಮೊದಲು ಈ ಯೋಜನೆ ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಬಳಿಕ ಈ ಯೋಜನೆಯಲ್ಲಿ ಖಾಸಗಿ ವಲಯದ ನೌಕರರು ಹಾಗೂ ಇತರ ರಾಜ್ಯಗಳ ಸರ್ಕಾರಿ ನೌಕರರನ್ನು ಕೂಡ ಸೇರಿಸಲಾಗಿದೆ. ಕೊವಿಡ್ -19 ಮಹಾಮಾರಿಯ ಕಾರಣ LTC ಯನ್ನು ಟ್ಯಾಕ್ಸ್ ಪರಧಿಯ ಹೊರಗಿಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಇದರಿಂದ ಸರ್ಕಾರಿ ನೌಕರರ ಜೇಬಿಗೆ ಹೆಚ್ಚಿನ ಪ್ರಮಾಣದ ಹಣ ಹೋಗಲಿದೆ ಎಂಬುದು ಸರ್ಕಾರದ ನಿರೀಕ್ಷೆ ಹಾಗೂ ಹಣವಿದ್ದಾಗ ನೌಕರರು ಅದನ್ನು ಖರ್ಚು ಕೂಡ ಮಾಡುವವರು ಎಂಬುದು ಸರ್ಕಾರದ ಅಭಿಪ್ರಾಯ. ಈ ಎಲ್ಲ ವ್ಯವಸ್ಥೆಯ ಹಿಂದೆ ಆರ್ಥಿಕಸ್ಥಿತಿ ಸುಧಾರಣೆಯ ಉದ್ದೇಶ ಸರ್ಕಾರದ್ದಾಗಿದೆ. ಕೊರೊನಾ ಪ್ರಕೋಪದ ಹಿನ್ನೆಲೆ ನೌಕರರಿಗೆ LTC ಲಾಭ ಸಿಕ್ಕಿರಲಿಲ್ಲ. ಹೀಗಾಗಿ ಇದರಿಂದ ಆ ನೌಕರರಿಗೆ ಭಾರಿ ಪರಿಹಾರ ಸಿಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ 4 ವರ್ಷಗಳ LTC ಲಾಭ ಸಿಗುತ್ತದೆ. ಇದನ್ನು ಬಳಸಿ ಅವರು ದೇಶದ ಯಾವದೇ ಭಾಗಕ್ಕೆ ಯಾತ್ರೆ ಕೈಗೊಳ್ಳಬಹುದು. ಈ ಅವಧಿಯಲ್ಲಿ ಅವರಿಗೆ ಎರಡೆರಡು ಬಾರಿ ಅವರಿಗೆ ತಮ್ಮ ಹೋಮ್ ಟೌನ್ ಗೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಇದರಲ್ಲಿ ನೌಕರರಿಗೆ ವಿಮಾನ ಪ್ರಯಾಣ, ರೈಲು ಪ್ರಯಾಣದ ವೆಚ್ಚ ಸಿಗುತ್ತದೆ. ಇದಲ್ಲದೆ ನೌಕರರಿಗೆ 10 ದಿನಗಳ PL ಅಥವಾ CL ಕೂಡ ಸಿಗುತ್ತದೆ.
- ಎಲ್‌ಟಿಸಿಗೆ ಬದಲಾಗಿ ನೌಕರರಿಗೆ ನಗದು ಹಣ ಪಾವತಿಸಲಾಗುವುದು. - ನೌಕರರ ದರ್ಜೆಗೆ ಅನುಗುಣವಾಗಿ ಪ್ರಯಾಣ ಶುಲ್ಕವನ್ನು ಪಾವತಿಸಲಾಗುತ್ತದೆ - ಶುಲ್ಕ ಪಾವತಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. - ಈ ಯೋಜನೆಯನ್ನು ಪಡೆಯುವ ನೌಕರರು ಬಾಡಿಗೆಯ ಮೂರು ಪಟ್ಟು ಹೆಚ್ಚು ಶುಲ್ಕವನ್ನು ಖರ್ಚು ಮಾಡಬೇಕಾಗುತ್ತದೆ - ರಜೆ ಎನ್‌ಕ್ಯಾಶ್‌ಮೆಂಟ್ ಹಣ ಪಾವತಿಯ ಸರಿಸಮಾನ ಖರ್ಚು ಮಾಡಬೇಕು. - 31 ಮಾರ್ಚ್ 2021 ರ ಮೊದಲು ಖರ್ಚು ಮಾಡಬೇಕಾಗುತ್ತದೆ - ಉದ್ಯೋಗಿಗಳು 12% ಅಥವಾ ಹೆಚ್ಚಿನ ಜಿಎಸ್‌ಟಿಯನ್ನು ಆಕರ್ಷಿಸುವ ವಸ್ತುವಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ - ಜಿಎಸ್ಟಿ ನೋಂದಾಯಿತ ಮಾರಾಟಗಾರ ಅಥವಾ ವ್ಯಾಪಾರಿಗಳಿಂದ ಮಾತ್ರ ಸೇವೆಗಳು ಅಥವಾ ಸರಕುಗಳನ್ನು ಖರೀದಿಸಿ - ಸೇವೆಗಳು ಅಥವಾ ಸರಕುಗಳ ಪಾವತಿಯನ್ನು ಸಹ ಡಿಜಿಟಲ್ ರೀತಿಯಲ್ಲಿ ಮಾಡಬೇಕಾಗುತ್ತದೆ - ಪ್ರಯಾಣ ಭತ್ಯೆ ಅಥವಾ ರಜೆ ಭತ್ಯೆ ಪಡೆಯುವಾಗ ಜಿಎಸ್‌ಟಿ ರಶೀದಿಯನ್ನು ನೀಡಬೇಕಾಗುತ್ತದೆ
ಕೊರೊನಾ ಕಾಲದಲ್ಲಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸರ್ಕಾರಿ ನೌಕರರ DA ಏರಿಕೆಯನ್ನು ತಡೆಹಿಡಿದಿತ್ತು. ಶೀಘ್ರದಲ್ಲಿಯೇ ಈ ತಡೆಯನ್ನು ತೆರವುಗೊಳಿಸಲಾಗುತ್ತಿದೆ. AICPI (All India Consumer Price Index) ಜಾರಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಶೇ.4 ರಷ್ಟು DA (DA Hike) ಏರಿಕೆಯಾಗಲಿದೆ ಎಂದು ಅಂದಾಜು ವ್ಯಕ್ತಪಡಿಸಲಾಗುತ್ತಿದೆ. ಇದಲ್ಲದೆ ನಿಂತುಹೋದ ಹಳೆ DA ಕೂಡ ವೇತನದಲ್ಲಿ ಅರಿಯರ್ ರೂಪದಲ್ಲಿ ಸೇರಿಸಲಾಗುತ್ತಿದೆ (Salary Hike). ಒಟ್ಟಾರೆ ಹೇಳುವುದಾದರೆ ಈ ಬಾರಿ ಸರ್ಕಾರಿ ನೌಕರರ ಮೇಲೆ ಧನವೃಷ್ಟಿಯಾಗಲಿದೆ ಎಂಬುದು ಮಾತ್ರ ನಿಜ.