8th Pay Commission: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, 34,560 ರೂ.ವರೆಗೆ ವೇತನ ಹೆಚ್ಚಳ ಸಾಧ್ಯತೆ
ಸರಿ ಸುಮಾರು ಪ್ರತಿ ದಶಕದಲ್ಲಿ ಹೊಸ ವೇತನ ಆಯೋಗವನ್ನು ಹೊರತರುವ ಪ್ರವೃತ್ತಿಯನ್ನು ಅನುಸರಿಸಿ, ಕೇಂದ್ರವು ಶೀಘ್ರದಲ್ಲೇ ಈ ಕ್ರಮವನ್ನು ಕೈಗೊಳ್ಳಬಹುದು ಎಂದು ತೋರುತ್ತದೆ.ಆದರೆ ಈ ಕುರಿತಾಗಿ ಇನ್ನೂ ಯಾವುದೇ ಅಧಿಕೃತ ಅಪ್ಡೇಟ್ ಗಳು ಬಂದಿಲ್ಲ.
ಈ ಘೋಷಣೆಯು ಮುಂದಿನ ವರ್ಷದ ಆರಂಭದಲ್ಲಿ ಬರಬಹುದು ಎಂದು ನಂಬಲಾಗಿದೆ,ಹೊಸ ವೇತನ ಆಯೋಗವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಮತ್ತು ಪಿಂಚಣಿಗಳನ್ನು ಸರಿಹೊಂದಿಸಲು, ಹಣದುಬ್ಬರ ಮತ್ತು ಇತರ ಆರ್ಥಿಕ ಪರಿಸ್ಥಿತಿಗಳ ಅಂಶವನ್ನು ಹೊಂದಿಸಲು ಸಿದ್ಧವಾಗಿದೆ.
8ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದರೆ, ಕೇಂದ್ರ ನೌಕರರ ಕನಿಷ್ಠ ವೇತನವು 18,000 ರೂ.ನಿಂದ ಸುಮಾರು 34,560 ರೂ.ಗೆ ಹೆಚ್ಚಳವಾಗಬಹುದು ಎನ್ನಲಾಗಿದೆ.
ಈ ಬದಲಾವಣೆಯು ವಿಶೇಷವಾಗಿ ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳನ್ನು ಪರಿಗಣಿಸಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ.
ಈಗ ಕೇಂದ್ರ ಸರ್ಕಾರಿ ನೌಕರರು ಎಂಟನೇ ವೇತನ ಆಯೋಗಕ್ಕೆ ಸಂಬಂಧಸಿದ ಅಪ್ಡೇಟ್ ಗಳಿಗೆ ಕುತೂಹಲದಿಂದ ಕಾಯುತ್ತಿದ್ದಾರೆ.