9ನೇ ಕ್ಲಾಸ್ ಓದಿದ ಈ ಕ್ರಿಕೆಟರ್ ಇನ್ಮುಂದೆ ಟೀಂ ಇಂಡಿಯಾ ಕ್ಯಾಪ್ಟನ್! ಈತನ ಆಸ್ತಿ ಮೌಲ್ಯ ಬರೋಬ್ಬರಿ 91 ಕೋಟಿ!
ಹಾರ್ದಿಕ್ ಪಾಂಡ್ಯ ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಗುಜರಾತ್’ನಲ್ಲಿ ಜನಿಸಿದ ಭಾರತದ ಆಲ್‌ರೌಂಡರ್, ಈಗ ಟೀಂ ಇಂಡಿಯಾದ ಟಿ20 ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಪಾಂಡ್ಯ ಅವರು ಆಲ್ ರೌಂಡರ್ ಮತ್ತು ಬಲಗೈ ವೇಗದ ಮಧ್ಯಮ ಬೌಲರ್. ಇವರ ಶಿಕ್ಷಣ, ಆಸ್ತಿ ಮೌಲ್ಯ, ಕ್ರಿಕೆಟ್ ವೃತ್ತಿಜೀವನದ ಬಗ್ಗೆ ತಿಳಿದುಕೊಳ್ಳೋಣ.
ಭಾರತದ ಆಲ್’ರೌಂಡರ್, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇವರ ಆಸ್ತಿ ಮೌಲ್ಯ $ 11 ಮಿಲಿಯನ್ (91 ಕೋಟಿ) ಇದೆ.
ಇನ್ನು ಹಾರ್ದಿಕ ಪಾಂಡ್ಯ ಓದಿದ್ದು 9ನೇ ತರಗತಿ. ಆ ಬಳಿಕ ಅವರು ಕ್ರಿಕೆಟ್ ಕಡೆ ಒಲವು ತೋರಿಸಿದರು.
ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ 15 ಕೋಟಿ ರೂ. ನೀಡಿ ಖರೀದಿಸಿತ್ತು.
ಹಾರ್ದಿಕ್ ಪಾಂಡ್ಯ ಲಾಭದಾಯಕ ಬ್ರ್ಯಾಂಡ್ ಅನುಮೋದನೆಗಳು ಮತ್ತು ಪ್ರಾಯೋಜಕತ್ವಗಳನ್ನು ಪಡೆದುಕೊಂಡಿದ್ದಾರೆ. ಈ ಅನುಮೋದನೆಗಳಿಂದ ಅವರ ನಿವ್ವಳ ಮೌಲ್ಯ ಗಣನೀಯ ಏರಿಕೆ ಕಂಡಿದೆ.
ಬಿಸಿಸಿಐ ನಿರ್ವಹಿಸುತ್ತಿರುವ ಪ್ರಸ್ತುತ ಒಪ್ಪಂದಗಳ ಪ್ರಕಾರ ಪಾಂಡ್ಯ ಗ್ರೇಡ್ ಎ ಒಪ್ಪಂದದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ವರ್ಷಕ್ಕೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಸ್ಟಾರ್ ಸ್ಪೋರ್ಟ್ಸ್, ಬೋಟ್, ಸಿನ್ ಡೆನಿಮ್, ಗಲ್ಫ್ ಆಯಿಲ್, ಒಪ್ಪೋ, ವಿಲನ್, ಡ್ರೀಮ್ 11, ಹಾಲಾ ಪ್ಲೇ, ಅಮೆಜಾನ್ ಅಲೆಕ್ಸಾ, ರಿಲಯನ್ಸ್ ರಿಟೇಲ್, ಮಾನ್ಸ್ಟರ್ ಎನರ್ಜಿ, ಮತ್ತು ಇನ್ನೂ ಅನೇಕ ಪ್ರಸಿದ್ಧ ಕಂಪನಿಗಳಿಗೆ ರಾಯಭಾರಿಯಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಬಳಿಕ ಐಷಾರಾಮಿ ಕಾರುಗಳ ಸಂಗ್ರಹವೇ ಇದೆ. ಪೋರ್ಷೆ ಕಯೆನ್ನೆ, ರೋಲ್ಸ್ ರಾಯ್ಸ್ (INR 6 ಕೋಟಿ), ಜೀಪ್ ಕಂಪಾಸ್, ಲಂಬೋರ್ಘಿನಿ ಹುರಾಕನ್ EVO (INR 4 ಕೋಟಿ ಮೌಲ್ಯ), ಆಡಿ A6, ಮರ್ಸಿಡಿಸ್ G-ವ್ಯಾಗನ್, ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಎಟಿಯೋಸ್ ಸೇರಿವೆ.