83ನೇ ವಯಸ್ಸಿಗೆ 29ರ ಗರ್ಲ್ ಫ್ರೆಂಡ್‌ನಿಂದ ತಂದೆಯಾದ ಖ್ಯಾತ ನಟ.!
ಹಾಲಿವುಡ್ ಹಿರಿಯ ನಟ ಅಲ್ ಪಚಿನೋ 83 ನೇ ವಯಸ್ಸಿಗೆ ನಾಲ್ಕನೇ ಬಾರಿ ತಂದೆಯಾದರು.
ಹಾಲಿವುಡ್ ಹಿರಿಯ ನಟ ಅಲ್ ಪಚಿನೋ 83 ನೇ ವರ್ಷದಲ್ಲಿ ತಮ್ಮ 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಅವರೊಂದಿಗೆ 2023 ರಲ್ಲಿ ಗಂಡು ಮಗುವನ್ನು ಸ್ವಾಗತಿಸಿದರು.
ನಟ ಅಲ್ ಪಚಿನೋ ತಮ್ಮ ಮಗನಿಗೆ ರೋಮನ್ ಪಚಿನೋ ಎಂದು ಹೆಸರಿಟ್ಟರು.
ಟಾಲಿವುಡ್ ಹಿರಿಯ ನಟರಾಗಿರುವ ಅಲ್ ಪಚಿನೋ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ದಿ ಗಾಡ್ ಫಾದರ್, ಸೆಂಟ್ ಆಫ್ ಎ ವುಮೆನ್, ಹೀಟ್, ಸರ್ಪಿಕೊ, ಸೀ ಆಫ್ ಲವ್, ದಿ ಡೆವಿಲ್ಸ್ ಅಡ್ವೊಕೇಟ್, ದಿ ಇನ್ಸೈಡರ್ ಮತ್ತು ಜಸ್ಟಿಸ್ ಫಾರ್ ಆಲ್, ಕಾರ್ಲಿಟೊಸ್ ವೇ, ಡೊನ್ನಿ, ಬ್ರಾಸ್ಕೊ, ಓಷಿಯನ್ಸ್ ಥರ್ಟೀನ್ ಹೀಗೆ ಹಲವು ಸಿನಿಮಾಗಳಲ್ಲಿ ಅಲ್ ಪಚಿನೋ ನಟಿಸಿದ್ದಾರೆ.