“ನಾನದನ್ನ ನೋಡಬೇಕು ಪ್ಲೀಸ್ ತೋರಿಸಿ”… ಪರಿಪರಿಯಾಗಿ ಬೇಡಿದ ಅಭಿಮಾನಿಗೆ ಮುಲಾಜಿಲ್ಲದೆ ಆ’ ಫೋಟೋ ಶೇರ್ ಮಾಡಿದ ನಟಿ
ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಪ್ರಿಯಾಂಕಾ ಮೋಹನ್ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪ್ರಿಯಾಂಕಾ ಮೋಹನ್ ಅವರ ತಂದೆ ಅರುಲ್ಮೋಹನ್ ಚಲನಚಿತ್ರ ನಿರ್ಮಾಪಕ. ತಾಯಿ ಸೈಲಜಾ ಗೃಹಿಣಿಯಾಗಿದ್ದು, ಡಿಂಪಲ್ ಎಂಬ ಸಹೋದರಿ ಇದ್ದಾರೆ. ಇನ್ನು ಪ್ರಿಯಾಂಕಾ ಕೊಯಮತ್ತೂರಿನ ಪಿಎಸ್’ಜಿ ಕಾಲೇಜಿನಲ್ಲಿ ಪದವಿ ಪಡೆದಿದ್ದು, 017 ರಲ್ಲಿ ನಡೆದ ಫೆಮಿನಾ ಸೌತ್ ಇಂಡಿಯಾದಲ್ಲಿ ಭಾಗವಹಿಸಿದ್ದರು.
ಆ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು, 2019 ರಲ್ಲಿ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 2021 ರಲ್ಲಿ ಡಾಕ್ಟರ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಭರತನಾಟ್ಯ ಮತ್ತು ಕರ್ನಾಟಕ ಸಂಗೀತವನ್ನೂ ಇವರು ಕಲಿತಿದ್ದಾರೆ.
ತಮ್ಮ ನಟನಾ ಕೌಶಲ್ಯ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಚಾತುರ್ಯದಿಂದ ಚಿತ್ರರಂಗದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದ್ದಾರೆ ಪ್ರಿಯಾಂಕ. ಅಂದಹಾಗೆ ಇತ್ತೀಚೆಗಷ್ಟೇ ಅಭಿಮಾನಿಯೊಬ್ಬರು, ನಟಿ ಬಳಿ ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದರು.
ಇನ್’ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಮೋಹನ್ ಅವರ ಬಳಿ, ಅಭಿಮಾನಿಯೊಬ್ಬ ನಿಮ್ಮ ಉಗುರುಗಳನ್ನು ನೋಡಬೇಕು ಎಂದು ಪರಿಪರಿಯಾಗಿ ಬೇಡಿಕೊಂಡಿದ್ದು, ತಕ್ಷಣವೇ ಅವರ ಆಸೆಯನ್ನು ಈಡೇರಿಸಿದ್ದಾರೆ. ಸದ್ಯ ಈ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.