ʼಕಿಸ್‌ʼ ಮಾಡುವುದರಿಂದ ಹರಡುತ್ತೆ ಮಾರಕ ಕಾಯಿಲೆ; ಏನಿದು ʼಮಾನೋನ್ಯೂಕ್ಲಿಯೊಸಿಸ್‌`..?

Wed, 18 Sep 2024-10:45 pm,

ಮಾನೋನ್ಯೂಕ್ಲಿಯೊಸಿಸ್ ಒಂದು ವೈರಲ್ ಸೋಂಕಾಗಿದ್ದು, ಇದು ಎಪ್ಸ್ಟೀನ್-ಬಾರ್ ವೈರಸ್ (EBV)ನಿಂದ ಉಂಟಾಗುತ್ತದೆ. ಇದು ಎಲ್ಲಾ ವಯೋಮಾನದವರಲ್ಲಿ ವ್ಯಾಪಕವಾಗಿ ಹರಡುತ್ತದೆ. 2023ರ ಸಂಶೋಧನೆಯ ಪ್ರಕಾರ 15 ಮತ್ತು 24ರ ನಡುವಿನ ವಯಸ್ಸಿನ ಜನರಲ್ಲಿ ಇದು ಹೆಚ್ಚಾಗಿ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. 

ಮಾನೋನ್ಯೂಕ್ಲಿಯೊಸಿಸ್‌ನ ಪ್ರಮುಖ ಕಾರಣವೆಂದರೆ ಹರ್ಪಿಸ್ವೈರಸ್ ಎಂಬ ವೈರಸ್ ಕುಟುಂಬಕ್ಕೆ ಸೇರಿದ EBV. EBV ಹೆಚ್ಚು ಸಾಂಕ್ರಾಮಿಕವಾಗಿದ್ದು, ಲಾಲಾರಸ, ಲೋಳೆಯ ಮತ್ತು ಕೆಲವೊಮ್ಮೆ ಕಣ್ಣೀರಿನ ಮೂಲಕ ಹರಡುವ ಬ್ಯಾಕ್ಟೀರಿಯಾ ಆಗಿರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ, ಅಂದರೆ ಚುಂಬನ ಅಥವಾ ಅವರ ಕೆಲ ವಸ್ತುಗಳನ್ನು ಮುಟ್ಟುವುದರಿಂದ ಇದು ಬರುತ್ತದೆ. ಈ ಬ್ಯಾಕ್ಟೀರಿಯಾ ಶೀತ, ಕೆಮ್ಮು ಸೇರಿ ಹಲವು ಸಮಸ್ಯೆಗೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾ ತಗುಲಿದರೆ ಸತತ 6 ವಾರಗಳ ಕಾಲ ಅದರ ಲಕ್ಷಣಗಳು ನಿಮ್ಮನ್ನು ಕಾಡಬಹುದು ಅಂತಾ ಹೇಳಲಾಗಿದೆ. 

ಮಾನೋನ್ಯೂಕ್ಲಿಯೊಸಿಸ್‌ ಬ್ಯಾಕ್ಟೀರಿಯಾದ ಸಾಮಾನ್ಯ ಲಕ್ಷಣವೆಂದರೆ ವಿಪರೀತ ಆಯಾಸವಾಗುವುದು. ಇದು ವಾರದಿಂದ ಹಿಡಿದು ತಿಂಗಳುಗಳ ಕಾಲ ಮುಂದುವರೆಯಬಹುದು. ನೀವು ಎಷ್ಟೆ ವಿಶ್ರಾಂತಿ ಪಡೆದರು ಈ ಆಯಾಸ ಕಡಿಮೆಯಾಗಲ್ಲ. ಇದೇ ಈ ಮೊನೊ ವೈರಸ್ ಅಥವಾ ಬ್ಯಾಕ್ಟೀರಿಯಾ ಹರಡಿರುವುದರ ಪ್ರಮುಖ ಲಕ್ಷಣ.

ಮಾನೋನ್ಯೂಕ್ಲಿಯೊಸಿಸ್‌ ತೀವ್ರ ಗಂಟಲು ನೋವಿಗೆ ಕಾರಣವಾಗುತ್ತದೆ. ಗಂಟಲು ಕೆಂಪು ಮತ್ತು ಊದಿಕೊಂಡಂತೆ ಕಾಣಿಸಬಹುದು. ಟಾನ್ಸಿಲ್‌ಗಳ ಮೇಲೆ ಬಿಳಿ ಗುಳ್ಳೆಗಳು ಅಥವಾ ಕೀವು ಸಹ ಕಂಡುಬರಬಹುದು.

ಮಾನೋನ್ಯೂಕ್ಲಿಯೊಸಿಸ್‌ ಬ್ಯಾಕ್ಟೀರಿಯಾ ಜನರಲ್ಲಿ ಜ್ವರಕ್ಕೂ ಸಹ ಕಾರಣವಾಗುತ್ತದೆ. ಆದರೆ ಈ ಜ್ವರವು ಸಾಮಾನ್ಯ ಸೀಸನಲ್ ಜ್ವರದಂತೆ ಕಂಡುಬರುತ್ತದೆ. ಈ ಕಾಯಿಲೆ ಬಂದರೆ ನಿಮಗೆ ಆಗಾಗ ಜ್ವರ ಕಾಡಬಹುದು.

ಮಾನೋನ್ಯೂಕ್ಲಿಯೊಸಿಸ್‌ ಹೊಂದಿರುವ ಅನೇಕರು ತಲೆನೋವು ಹೊಂದಿರುತ್ತಾರೆ. ಇದು ಸೌಮ್ಯ ಅಥವಾ ತೀವ್ರವಾಗಿರಬಹುದು. ಈ ತಲೆನೋವು ಆಯಾಸ ಮತ್ತು ಸ್ನಾಯು ನೋವುಗಳಂತಹ ಇತರ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು. ತಲೆನೋವಿನ ಕಾರಣ ವಿಪರೀತ ಆಯಾಸ, ಕಣ್ಣು ಉರಿ ಕಾಣಿಸಿಕೊಳ್ಳುತ್ತದೆ.

ಮಾನೋನ್ಯೂಕ್ಲಿಯೊಸಿಸ್‌ ದೇಹದಾದ್ಯಂತ ಸಾಮಾನ್ಯ ಸ್ನಾಯು ನೋವು ಮತ್ತು ದೌರ್ಬಲ್ಯ ಉಂಟುಮಾಡಬಹುದು. ಇದು ಬ್ಯಾಕ್ಟೀರಿಯಾ ಹರಡಿದ ಬಳಿಕ ತಿಂಗಳ ಕಾಲದವರೆಗೂ ಕಾಡಬಹುದು. ಕೀಲು, ಸ್ನಾಯು ಮತ್ತು ಮಾಂಸಖಂಡಗಳ ನೋವಿಗೂ ಕಾರಣವಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link