ಇನ್ನು ನಾಲ್ಕು ದಿನಗಳಲ್ಲಿ ಸರ್ಕಾರಿ ನೌಕರರ ಖಾತೆ ಸೇರುವುದು ದೊಡ್ಡ ಮೊತ್ತ! ವೇತನ ಹೆಚ್ಚಳದೊಂದಿಗೆ ಅರಿಯರ್ಸ್ ಕೂಡಾ ಲಭ್ಯ
ಮಾರ್ಚ್ 25 ರಂದು ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮಾ.30ರಂದು ಹೋಳಿ ಹಬ್ಬದ ಉಡುಗೊರೆ ಸಿಗುವ ನಿರೀಕ್ಷೆ ಇದೆ.
ಮಾರ್ಚ್ 31 ರಜಾ. ಹಾಗಾಗಿ ಕೇಂದ್ರ ನೌಕರರ ಹೊಸ ವೇತನ ಮಾರ್ಚ್ 30ರಂದೇ ಖಾತೆಗೆ ಬೀಳುವ ನಿರೀಕ್ಷೆಯಿದೆ.ಆದರೆ, ಈ ವರ್ಷ ಮಾರ್ಚ್ 31ರ ಭಾನುವಾರದಂದು ಬ್ಯಾಂಕ್‌ಗಳು ತೆರೆದಿರುತ್ತವೆ ಎಂದು ಆರ್‌ಬಿಐ ಈಗಾಗಲೇ ತಿಳಿಸಿದೆ.
ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸುವ ಮೂಲಕ ಸರ್ಕಾರ ಈಗಾಗಲೇ ಶುಭ ಸುದ್ದಿ ನೀಡಿದೆ. ಈ ಮೂಲಕ ತುಟ್ಟಿಭತ್ಯೆಯನ್ನು ಪ್ರಸ್ತುತ ಶೇ.46ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ.
ಈ ವೇತನ ಹೆಚ್ಚಳವು ಕಳೆದ ಜನವರಿಯಿಂದ ಜಾರಿಗೆ ಬಂದಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೂ ಜನವರಿ ಮತ್ತು ಫೆಬ್ರವರಿಯ ಎರಡು ತಿಂಗಳ ಬಾಕಿ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರ ಭತ್ಯೆ ಶೇ.50ರಷ್ಟು ಹೆಚ್ಚಿರುವುದರಿಂದ ಮನೆ ಬಾಡಿಗೆ ಭತ್ಯೆ ಅಂದರೆ ಎಚ್.ಆರ್.ಎ.ಕೂಡಾ ಏರಲಿದೆ.
ತುಟ್ಟಿಭತ್ಯೆ ಶೇ. 50 ರಷ್ಟಾದ ಕಾರಣ, ಮಕ್ಕಳ ಶಿಕ್ಷಣ ಭತ್ಯೆ, ವಸತಿ ಭತ್ಯೆ, ಪ್ರಯಾಣ ಭತ್ಯೆ, ಗ್ರಾಚ್ಯುಟಿಯಲ್ಲಿ ಕೂಡಾ ಹೆಚ್ಚಳವಾಗುವ ಸಾಧ್ಯತೆ ಇದೆ.