ಭಾರತೀಯ ಸ್ಟಾರ್ ಕ್ರಿಕೆಟಿಗರ ಪ್ರೇಮ ಪುರಾಣದ ಬಗ್ಗೆ ಇಲ್ಲಿದೆ ಇಂಟರಸ್ಟಿಂಗ್ ಮಾಹಿತಿ..!

Thu, 05 Aug 2021-5:59 pm,

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಅವರ ಪ್ರೇಮಕಥೆ ಅದ್ಭುತವಾಗಿದೆ. ಪ್ರೇಮಿಗಳ ದಿನದಂದು ಕೂಲ್ ಕ್ಯಾಪ್ಟನ್ ಧೋನಿ ತಮ್ಮ ಪತ್ನಿ ಸಾಕ್ಷಿಗೆ ಆಸ್ಟ್ರೇಲಿಯಾದ ಹೋಟೆಲ್‌ನಲ್ಲಿ ಪ್ರೇಮನಿವೇದನೆ ಮಾಡಿದ್ದರು. ತುಂಬಾ ಸರಳವಾದ ಗೆಸ್ಚರ್ ನಲ್ಲಿ ಧೋನಿ ಮಾಡಿದ ಪ್ರಪೋಸ್ ರೋಮ್ಯಾಂಟಿಕ್ ಆಗಿತ್ತು.

ಟೀಂ ಇಂಡಿಯಾದ ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶ ಸ್ಟ್ಯಾಂಕೋವಿಕ್ ಪ್ರೀತಿ ಒಂದು ರೀತಿ ಸುಂಟರಗಾಳಿಯಂತಿತ್ತು. ಈ ಇಬ್ಬರು ಪ್ರಣಯ ಪಕ್ಷಗಳ ರೀತಿ ಕಾಲ ಕಳೆದು ಬಳಿಕ ಮದುವೆಯಾದರು. ಐಷಾರಾಮಿ ಬೋಟ್ ವೊಂದರಲ್ಲಿ ನತಾಶಳ ಬೆರಳಿಗೆ ಉಂಗುರ ತೋಡಿಸುವ ಮೂಲಕ ಹಾರ್ದಿಕ್ ಪ್ರೇಮ ನಿವೇದನೆ ಮಾಡಿದ್ದರು.   

ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕ್ರಿಕೆಟ್ ಆಟವನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಅವರ ಪತ್ನಿ ರಿತಿಕಾ ಸಜದೇಹ್ ಅವರನ್ನು ಪ್ರೀತಿಸುತ್ತಾರೆ. ಹೀಗಾಗಿಯೇ ಅವರು ತಾವು ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಮೈದಾನದಲ್ಲಿದೆಯೇ ರಿತಿಕಾಗೆ ಪ್ರಪೋಸ್ ಮಾಡಿದ್ದರು. ರೋಹಿತ್ ಮುಂಬೈನ ಬೋರಿವಲಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರಿತಿಕಾಳಿಗೆ ಪ್ರೇಮನಿವೇದನೆ ಮಾಡಿದ್ದರು.  

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯಾವಳಿಯ ವೇಳೆ ನಟಿಯಾಗಿದ್ದ ಗೀತಾ ಬಸ್ರಾಗೆ ಪ್ರಪೋಸ್ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಗೀತಾ ಅವರು ಬಜ್ಜಿ ಪ್ರೇಮನಿವೇದನೆಗೆ ಓಕೆ ಎಂದು ಹೇಳಿರಲಿಲ್ಲ. ಬಳಿಕ ಇಬ್ಬರು ಪರಸ್ಪರ ಹತ್ತಿರವಾಗಿ ಒಬ್ಬರನೊಬ್ಬರು ಅರ್ಥಮಾಡಿಕೊಂಡರು. 8 ವರ್ಷಗಳ ಡೇಟಿಂಗ್ ನಂತರ ಇಬ್ಬರು ಸತಿ-ಪತಿಗಳಾದರು.  

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 10ನೇ ಆವೃತ್ತಿಯ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ನಟಿ ಸಾಗರಿಕಾ ಘಾಟ್ಗೆ ಅವರಿಗೆ ಪ್ರೇಮನಿವೇದನೆ ಮಾಡಿಕೊಂಡರು. ಇಬ್ಬರು ತಡಮಾಡದೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಕೂಡ ಆದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link