ಅಂತೂ ಇಂತೂ... ಕೊನೆಗೂ ವಾಮಿಕಾ ಮತ್ತು ಅಕಾಯ್ ಫೋಟೋ ತೋರಿಸಿದ ಅನುಷ್ಕಾ! ಎಷ್ಟೊಂದು ಕ್ಯೂಟ್ ಆಗಿದ್ದಾರೆ ಕೊಹ್ಲಿಯ ಕಂದಮ್ಮಗಳು! ಫೋಟೋ ನೋಡಿ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ಇದುವರೆಗೂ ತಮ್ಮ ಮಕ್ಕಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದ ಈ ಜೋಡಿ, ಇದೀಗ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಮುದ್ದು ಮುಖದ ಇಬ್ಬರು ಕಂದಮ್ಮಗಳನ್ನು ಮಡಿಲಲ್ಲಿ ಕೂರಿಸಿ ದಂಪತಿ ಫೋಟೋಗೆ ಫೋಸ್ ಕೊಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಈ ಫೋಟೋವನ್ನು ಅನುಷ್ಕಾ ಶೇರ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಫೋಟೋವನ್ನು ಗಮನಿಸಿದರೆ ಮಾರ್ಫ್ ಮಾಡಿರುವಂತೆ ಕಾಣಿಸುತ್ತಿದೆ. ಯಾರದ್ದೋ ಫೋಟೋಗೆ ವಿರುಷ್ಕಾ ಫ್ಯಾಮಿಲಿ ಫೋಟೋವನ್ನು ಮಾರ್ಫ್ ಮಾಡಲಾಗಿದೆ ಎಂದನಿಸುತ್ತದೆ.
ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಕಾಯ್ ಮತ್ತು ವಾಮಿಕರನ್ನು ಮೊದಲ ಬಾರಿಗೆ ನೋಡಿ ಖುಷಿಪಟ್ಟಿದ್ದರು. ಆದರೆ ಮಾರ್ಫ್ ಫೋಟೋ ಎಂದು ಭಾವಿಸಿದ ತಕ್ಷಣ ನಿರಾಸೆಗೊಂಡಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್‌ನಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ಜನಸಾಮಾನ್ಯರಂತೆ ಲಂಡನ್‌ನಲ್ಲಿ ಜೀವನ ನಡೆಸಬೇಕೆಂಬ ಉದ್ದೇಶದಿಂದಲೇ ವಿರುಷ್ಕಾ ಜೋಡಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಲಂಡನ್ ಬೀದಿಯಲ್ಲಿ ಈ ಜೋಡಿ ಸುತ್ತಾಡುವ ಫೋಟೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.