4 ವರ್ಷ ಗುಟ್ಟಾಗಿ ಪ್ರೀತಿಸಿ ಹಿಂದೂ ಪತ್ರಕರ್ತೆಯನ್ನ ಮದ್ವೆಯಾದ ಟೀಂ ಇಂಡಿಯಾದ ಮುಸ್ಲಿಂ ಕ್ರಿಕೆಟಿಗ! ಪ್ರೇಮಕ್ಕಾಗಿ ಧರ್ಮದ ಗೋಡೆ ಒಡೆದ ಪ್ರೇಮಿಗಳಿವರು!
ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಫೀಲ್ಡಿಂಗ್’ನಿಂದಲೂ ಭಾರತ ತಂಡಕ್ಕೆ ಹೊಸ ಗುರುತನ್ನು ನೀಡಿದ ಮೊಹಮ್ಮದ್ ಕೈಫ್, ಮೈದಾನದಲ್ಲಿದ್ದರೆ ಚಿರತೆಯಂತೆ ಜಿಗಿದು ಅದ್ಭುತ ಕ್ಯಾಚ್ ಹಿಡಿಯುತ್ತಿದ್ದರು.
ಆದರೆ ಮೊಹಮ್ಮದ್ ಕೈಫ್ ಮೊದಲ ನೋಟದಲ್ಲೇ 'ಕ್ಲೀನ್ ಬೌಲ್ಡ್' ಆಗಿದ್ದು ಪತ್ರಕರ್ತೆಯೊಬ್ಬಳ ಸೌಂದರ್ಯಕ್ಕೆ. ಮೈದಾನದಲ್ಲಿ ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾಗುತ್ತಿದ್ದ ಕೈಫ್ ನಿಜ ಜೀವನದಲ್ಲಿ ಹುಡುಗಿಯೊಬ್ಬಳ ಅಂದ ಕಂಡು 'ಕ್ಲೀನ್ ಬೌಲ್ಡ್' ಆಗಿದ್ದರು.
ಅಂದಹಾಗೆ ಆ ಹುಡುಗಿಯ ಹೆಸರು ಪೂಜಾ ಯಾದವ್. ಒಬ್ಬ ವೃತ್ತಿಪರ ಪತ್ರಕರ್ತೆ. ಪಾರ್ಟಿಯಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಇವರಿಬ್ಬರು ಸುಮಾರು 4 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರಂತೆ.
ಅಂದಹಾಗೆ ಕೈಫ್ ಮುಸ್ಲಿಂ, ಪೂಜಾ ಹಿಂದೂ. ಆದರೂ ಕೈಫ್ ತನ್ನ ಕಾಮನ್ ಫ್ರೆಂಡ್ ಮೂಲಕ ಪೂಜಾಳನ್ನು ಸಂಪರ್ಕಿಸಿ ನಂತರ ಇಬ್ಬರೂ ಸ್ನೇಹಿತರಾದರು. ಆ ದಿನಗಳಲ್ಲಿ ಕೈಫ್ ಕ್ರಿಕೆಟ್’ನಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದರು, ಅವರ ಪಯಣದಲ್ಲಿ ಅವರಿಗೆ ಸ್ನೇಹಿತೆಯಾಗಿ ಬೆಂಬಲ ಬೇಕಿತ್ತು, ಅದನ್ನು ಪೂಜಾ ತುಂಬಾ ಚೆನ್ನಾಗಿ ಪೂರೈಸಿದರು.
ಒಂದು ದಿನ ಕೈಫ್ ತಮ್ಮ ಭಾವನೆಗಳನ್ನು ಪೂಜಾಗೆ ಹೇಳಿಕೊಂಡರು. ಪೂಜಾ ಕೂಡ ತಕ್ಷಣ ಒಪ್ಪಿಗೆ ಸೂಚಿಸಿದ್ದರು. ಆದರೆ ಕೈಫ್ ಮುಸ್ಲಿಂ ಮತ್ತು ಪೂಜಾ ಹಿಂದೂ ಎಂಬ ಕಾರಣದಿಂದ ಇಬ್ಬರಿಗೂ ಮುಂದಿನ ಪ್ರಯಾಣ ಸುಲಭವಾಗಿರಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಇಬ್ಬರ ಮನೆಯವರಿಗೂ ಈ ಸಂಬಂಧವನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು. ಆದರೆ ಕಾಲಕ್ರಮೇಣ ಎರಡೂ ಮನೆಯವರು ಅವರ ಅಭಿಪ್ರಾಯವನ್ನು ಅರ್ಥಮಾಡಿಕೊಂಡು, ನಂತರ ಮದುವೆಗೆ ಒಪ್ಪಿಗೆ ನೀಡಿದರು.
ಇಬ್ಬರೂ ಸುಮಾರು ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ನಂತರ 2011 ರಲ್ಲಿ ವಿವಾಹವಾದರು. ಇಂದು ಈ ದಂಪತಿಗೆ 2 ಮಕ್ಕಳಿದ್ದಾರೆ. ಕೈಫ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ತನ್ನ ಮತ್ತು ಪೂಜಾ ಅವರ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಕೈಫ್ ಭಾರತದ ಪರ 13 ಟೆಸ್ಟ್ ಪಂದ್ಯ ಮತ್ತು 123 ODIಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 624, 2753 ರನ್ ಗಳಿಸಿದ್ದಾರೆ. ODIಗಳಲ್ಲಿ ಎರಡು ಶತಕ ಮತ್ತು 17 ಅರ್ಧ ಶತಕ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿವೆ.
2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ ಅವರು ಕ್ರಿಕೆಟ್‌ನಿಂದ ನಿವೃತ್ತರಾದರು. ಮತ್ತು ಈ ದಿನಗಳಲ್ಲಿ ಟಿವಿ ಚಾನೆಲ್’ಗಳಲ್ಲಿ ಕ್ರಿಕೆಟ್ ಚರ್ಚೆಗಳಲ್ಲಿ ಪರಿಣಿತರಾಗಿ ಕಾಣುತ್ತಾರೆ.