ಇದು ವರ್ಣಚಿತ್ರಕಾರರ ಗ್ರಾಮ, ಮನೆಯಿಂದ ರಸ್ತೆವರೆಗೆ ಹಲವು ಕಲಾಕೃತಿಗಳು: See Pics

Thu, 13 Jun 2019-12:08 pm,

ಈ ಕಲೆಯಲ್ಲಿ ಬಹಳ ನುರಿತರಾಗಿರುವ ಗ್ರಾಮದ ಜನತೆಯ ಕುಂಚದಲ್ಲಿ ಕ್ಯಾನ್ವಾಸ್, ಗೋಡೆ, ಬಟ್ಟೆ, ಮಣ್ಣು ಇತ್ಯಾದಿಗಳಲ್ಲಿ ರೋಮಾಂಚಕ ಚಿತ್ರಗಳು ಮೂಡಿಬಂದಿವೆ. ವರ್ಣಚಿತ್ರಕಾರ ಜನಗಣ್ ಶ್ಯಾಮ್  ಅವರು ಜೂನ್ 12, 1962ರಂದು ಪಟಂಗಾರ್ ಗ್ರಾಮದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಆರ್ಥಿಕ ತೊಂದರೆಯಿಂದಾಗಿ ಅವರಿಗೆ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ವರ್ಣಚಿತ್ರದಿಂದಾಗಿ ದೇಶ-ವಿದೇಶಗಳಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಪಸರಿಸುವ ಮೂಲಕ ಒಂದು ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡರು.

ದಿವಂಗತ ಜನಗಣ್ ಶ್ಯಾಮ್ ಅವರಿಗೆ ವರ್ಣಚಿತ್ರದ ಕ್ಷೇತ್ರದಲ್ಲಿ ದಕ್ಷಿಣ ಆಫ್ರಿಕಾ, ಪ್ಯಾರಿಸ್ ಸೇರಿದಂತೆ ಹಲವು ದೇಶಗಳ ಗೌರವ ಸನ್ಮಾನ ಲಭಿಸಿದೆ. ಜನಗಣ್ ಶ್ಯಾಮ್  3 ಜುಲೈ 2001 ರಂದು ಜಪಾನಿನಲ್ಲಿ ನಿಧನರಾದರು.

ಪಟಂಗಾರ್ ಗ್ರಾಮದಲ್ಲಿ ದಿವಂಗತ ಜನಗಣ್ ಶ್ಯಾಮ್ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದಿವಂಗತ ಜನಗಣ್ ಶ್ಯಾಮ್ ಅವರನ್ನು ಗ್ರಾಮದ ಜನ ತಮ್ಮ ಆದರ್ಶ ವ್ಯಕ್ತಿ ಎಂದು ಭಾವಿಸುತ್ತಾರೆ. ಅವರ ಪ್ರೇರಣೆಯಿಂದಲೇ ಇಂದು ಗ್ರಾಮದ ಹಲವರು ನುರಿತ ವರ್ಣಚಿತ್ರಕಾರರಾಗಿದ್ದಾರೆ. ಈ ಗ್ರಾಮವು ಸುಮಾರು 1000 ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ 90 ಪ್ರತಿಶತ ಜನರು ಚಿತ್ರಕಲೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ, ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚಿನ ವರ್ಣಚಿತ್ರಗಳನ್ನು ಇಲ್ಲಿ ನಿರ್ಮಿಸಲಾಗಿದೆ.

ಪ್ರಾಕೃತಿಕ ಚಿತ್ರಕಲೆಯ ಜೊತೆಗೆ ಬುಡಕಟ್ಟು ದೇವತೆಗಳು, ಪ್ರಾಣಿಗಳು, ಬುಡಕಟ್ಟು ಸಂಪ್ರದಾಯಗಳು, ನೈಸರ್ಗಿಕ ಪರಿಸರ, ಕಾಡು ಪ್ರಾಣಿಗಳ ಚಿತ್ರಣವು ಇವರ ಕುಂಚದಲ್ಲಿ ಮೂಡಿಬರುತ್ತವೆ. ಬುಡಕಟ್ಟು ಕಥೆಗಳು ಮತ್ತು ಸಂಪ್ರದಾಯಗಳ ವಿವರಣೆಗಳು ಕೂಡ ಈ ಚಿತ್ರಗಳಲ್ಲಿ ಬಹಳ ಅದ್ಭುತವಾಗಿ ಮೂಡಿಬಂದಿವೆ. 

ಈ ಪೇಂಟಿಂಗ್ ಗಳನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಇಲ್ಲಿ ವಿದೇಶಿಯರು ಈ ಪೇಂಟಿಂಗ್ ಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಈ ಪೇಂಟಿಂಗ್ ಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಮೂರು ಗುಂಪುಗಳು ಸಕ್ರಿಯವಾಗಿವೆ.

ಗೋಂಡಿ  ವರ್ಣಚಿತ್ರಗಳ ಶ್ರೇಷ್ಠ ಲಕ್ಷಣವೆಂದರೆ ಅದರಲ್ಲಿರುವ ರೇಖೆಗಳು ಮತ್ತು ಬಿಂದುಗಳು ವಿಶಿಷ್ಟವಾಗಿರುತ್ತವೆ. ಇಡೀ ಪೇಂಟಿಂಗ್ ಬಿಂದು ಮತ್ತು ರೇಖೆಯ ಮೇಲೆ ಆಧಾರಿತವಾಗಿದೆ. ಗೋಂಡಿ ಕಲ್ಪನೆಯ ಸಂಪ್ರದಾಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಕೂಡಾ ನೀಡುತ್ತದೆ. ಪ್ರತಿ ಚಿತ್ರದ ಹಿಂದೆ ಆದಿವಾಸಿಗಳ ಕಥೆ ಅಥವಾ ಸಂಪ್ರದಾಯ ಅಡಗಿದೆ. ಚಿತ್ರಕ್ಕೆ ಸಂಗೀತವನ್ನು ಪರಿವರ್ತಿಸುವುದು ಕೂಡಾ ಸ್ಪಷ್ಟವಾಗಿ ಕಾಣುತ್ತದೆ. ಗೋಂಡಿ ಚಿತ್ರಗಳು ಕಲ್ಪನಾತೀತವಾಗಿ ಮೂಡಿಬರುತ್ತವೆ. ಇದು ಪ್ರಕೃತಿಯೊಂದಿಗೆ ಬುಡಕಟ್ಟುಗಳ ಸಂಘಟನೆಯು ಏನು ಎಂದು ಚಿತ್ರಿಸುತ್ತದೆ. ಸ್ಥಳೀಯ ವರ್ಣಚಿತ್ರಕಾರರ ಪ್ರಕಾರ, ಅವರು ತಮ್ಮ ಕಲೆಯ ಮೂಲಕ ತಿಂಗಳಿಗೆ 20 ರಿಂದ 30 ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link