ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ `ಗರ್ಲ್` ಯಾರು ಗೊತ್ತಾ?

Fri, 14 Jun 2024-5:39 pm,

ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌’ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸೂಪರ್ 8 ಪ್ರವೇಶಕ್ಕೆ ಹೆಜ್ಜೆಯಿಟ್ಟಿದೆ. ಈ ಹಿಂದೆ ನಡೆದ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ವಿರುದ್ಧದ ಪಂದ್ಯಗಳಲ್ಲಿ ಸೂಪರ್ ಪ್ರದರ್ಶನ ನೀಡಿದ್ದು, ಭರ್ಜರಿ ಜಯ ಸಾಧಿಸಿತ್ತು.

ಇನ್ನೊಂದೆಡೆ ಪಾಕಿಸ್ತಾನ ತಂಡ ಈ ಹಿಂದೆ ನಡೆದ ಪಂದ್ಯದಲ್ಲಿ ಕೆನಡಾವನ್ನು ಸೋಲಿಸುವ ಮೂಲಕ ಸೂಪರ್-8 ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಕಠಿಣ ಹಾದಿ ಮಾತ್ರ ನಿಶ್ಚಿತ.

ಪಾಕಿಸ್ತಾನವು ತನ್ನ ಉಳಿದ ಪಂದ್ಯಗಳನ್ನು ಗೆಲ್ಲಬೇಕು, ಜೊತೆಗೆ ಇತರ ಪಂದ್ಯಗಳ ಫಲಿತಾಂಶಗಳು ಪಾಕ್ ಲೆಕ್ಕಾಚಾರದ ಪ್ರಕಾರ ಸಾಗಬೇಕು. ಹೀಗಾದರೆ ಮಾತ್ರ ಸೂಪರ್ 8 ಪ್ರವೇಶ ಸಾಧ್ಯ.

ಈ ಎಲ್ಲದರ ಮಧ್ಯೆ ಪಾಕಿಸ್ತಾನ-ಕೆನಡಾ ಪಂದ್ಯ ನಡೆಯುತ್ತಿದ್ದ ಸಂದರ್ಭದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಪಾಕಿಸ್ತಾನಿ ಹುಡುಗಿಯೊಬ್ಬಳು ವಿರಾಟ್ ಕೊಹ್ಲಿಯ ಪೆಂಡೆಂಟ್ ಧರಿಸಿ ಕ್ರೀಡಾಂಗಣಕ್ಕೆ ಬಂದಿದ್ದಾಳೆ. ಈ ಪೆಂಡೆಂಟ್’ನಲ್ಲಿ ವಿರಾಟ್ ಕೊಹ್ಲಿಯ ಫೋಟೋ ಕಂಡಬಂದಿದೆ.

ಈ ಪೆಂಡೆಂಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ತಡ, ಹಲವು ಪ್ರತಿಕ್ರಿಯೆಗಳನ್ನು ನೆಟ್ಟಿಗರು ನೀಡುತ್ತಿದ್ದಾರೆ. ಅಂದಹಾಗೆ ಈ ಮಿಸ್ಟರಿ ಗರ್ಲ್ ಹೆಸರು ಫಿಜಾ ಖಾನ್. ಸೋಶಿಯಲ್ ಮೀಡಿಯಾದಲ್ಲಿ ‘ಲವ್ ಖಾನಿ’ ಎಂದೇ ಫೇಮಸ್ ಆಗಿದ್ದಾಳೆ.

ಫಿಜಾ ಖಾನ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಪಾಕಿಸ್ತಾನದಲ್ಲಿ ಜನಿಸಿದ ಫಿಜಾ ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಬಗೆಗಿನ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link