ಜೂ. ಅನುಷ್ಕಾ ಶರ್ಮಾ ಜೊತೆ ಪಾಕ್ ಮಾಜಿ ನಾಯಕ ಬಾಬರ್ ಅಜಂ ಡೇಟಿಂಗ್!? ವಿರಾಟ್ ಕೊಹ್ಲಿ ಪತ್ನಿಯಂತೆ ಕಾಣಿಸುವ ಆ ಸುಂದರಿ ಯಾರು ಗೊತ್ತಾ?
ಕ್ರಿಕೆಟ್ ಆಟಗಾರ ಬಾಬರ್ ಅಜಮ್ ಅವರು ಇತ್ತೀಚೆಗೆ ಪಾಕಿಸ್ತಾನದ ವೈಟ್-ಬಾಲ್ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ಆಟವನ್ನು ಸುಧಾರಿಸುವತ್ತ ಗಮನ ಹರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು.
ಇನ್ನೊಂದೆಡೆ ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ನಾಕೌಟ್ ಹಂತವನ್ನು ತಲುಪಲು ಪಾಕಿಸ್ತಾನ ವಿಫಲವಾದ ಬಳಿಕ ಬಾಬರ್ ಕಳೆದ ವರ್ಷ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ಮಾರ್ಚ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ʼನಲ್ಲಿ (ಯುಎಸ್‌ಎ) ಐಸಿಸಿ ಟಿ 20 ವಿಶ್ವಕಪ್‌ಗೆ ಮುನ್ನ ವೈಟ್-ಬಾಲ್ ನಾಯಕನಾಗಿ ಮರಳಿದರು. ಅಲ್ಲಿ ಆರಂಭಿಕ ಗುಂಪು ಹಂತವನ್ನು ಸಹ ದಾಟಲು ಸಾಧ್ಯವಾಗಿರಲಿಲ್ಲ.
ಇನ್ನೊಂದೆಡೆ ಬಾಬರ್ ಆಜಂ ತಮ್ಮ ವೃತ್ತಿಜೀವನದ ಹೊರತಾಗಿ, ವೈಯಕ್ತಿಕ ಜೀವನದಿಂದಲೂ ಮುಖ್ಯಾಂಶದಲ್ಲಿರುತ್ತಾರೆ. ಐಷಾರಾಮಿ ಜೀವನವನ್ನು ನಡೆಸುತ್ತಿರುವ ಅಜಂ ಹೆಸರು ಆಗಾಗ್ಗೆ ಓರ್ವ ನಟಿ ಜೊತೆ ಕೇಳಿಬರುತ್ತದೆ.
ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಪಾಕಿಸ್ತಾನಿ ತಂಡದ ಮಾಜಿ ನಾಯಕ ಬಾಬರ್ ಅಜಮ್ ಹೋಟೆಲ್‌ನಲ್ಲಿ ಓರ್ವ ಯುವತಿ ಜೊತೆ ಡಿನ್ನರ್ ಡೇಟ್ ಮಾಡುತ್ತಿರುವುದು ಕಂಡುಬಂದಿತ್ತು.
ಈ ಹುಡುಗಿಯನ್ನು ಬಾಬರ್ ಆಜಮ್ ಗರ್ಲ್ ಫ್ರೆಂಡ್ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆ ಹುಡುಗಿ ನಿಜವಾಗಿಯೂ ಬಾಬರ್ ಆಜಮ್ ಗೆಳತಿಯೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.
ಇವರಷ್ಟೇ ಅಲ್ಲದೆ, ಮತ್ತೋರ್ವ ಯುವತಿ ಜೊತೆಯೂ ಬಾಬರ್ ಹೆಸರು ತಳುಕು ಹಾಕಿತ್ತು. ಅಂದಹಾಗೆ ಈ ವಿಚಾರ ಹೆಚ್ಚಾಗಿ ಸದ್ದು ಮಾಡಿದ್ದು, ಆಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾಳನ್ನು ಹೋಲುತ್ತಿರುವುದು.
ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಬರ್ ಆಜಮ್ ಶೀಘ್ರದಲ್ಲೇ ಈ ಯುವತಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಈಕೆ ಹೆಸರು ಹನಿಯಾ ಅಮೀರ್. ಈಕೆ ನೋಡಲು ಕೊಂಚ ಅನುಷ್ಕಾ ಶರ್ಮಾಳಂತೆ ಕಾಣಿಸುತ್ತಾರೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈಕೆಯನ್ನು ಪಾಕಿಸ್ತಾನದ ಅನುಷ್ಕಾ ಶರ್ಮಾ ಎಂದು ಕರೆಯುತ್ತಾರೆ. ಹನಿಯಾ ವೃತ್ತಿಯಲ್ಲಿ ಪಾಕಿಸ್ತಾನಿ ನಟಿ.