30 ವರ್ಷಗಳ ನಂತರ ದಸರಾದಂದು ರೂಪುಗೊಳ್ಳಲಿದೆ ಅಪರೂಪದ ಯೋಗ: ಮೂರು ರಾಶಿಯವರಿಗೆ ವಿಶೇಷ ಲಾಭ
ದಸರಾ ಹಬ್ಬವನ್ನು ನಾಡ ಹಬ್ಬ ಎಂತಲೇ ಕರೆಯಲಾಗುತ್ತದೆ. ಇದು ಕೆಟ್ಟತನದ ವಿರುದ್ಧ ಒಳ್ಳೆಯತನದ ವಿಜಯದ ಸಂಕೇತ, ಅಸತ್ಯ ಅಧರ್ಮದ ವಿರುದ್ಧ ಸತ್ಯ, ಧರ್ಮದ ಜಯ ಎಂದು ಇದನ್ನು ವಿಜಯ ದಶಮಿ ಎಂದು ಸಹ ಕರೆಯಲಾಗುತ್ತದೆ. ಈ ದಿನ ತಾಯಿ ದುರ್ಗೆ ದಶಾವತಾರಗಳನ್ನು ಎತ್ತಿ ಮಹಿಷಾಸುರನನ್ನು ಸಂಹರಿಸಿದ ದಿನ ಎಂತಲೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಾರಿಯ ದಸರಾದಲ್ಲಿ ಮೂವತ್ತು ವರ್ಷಗಳ ಬಳಿಕ ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ.
ಈ ವರ್ಷ ಅಕ್ಟೋಬರ್ 24, 2023ರಂದು ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಬರೋಬ್ಬರಿ 30 ವರ್ಷಗಳ ಬಳಿಕ ದಸರಾ ಶುಭ ದಿನದಂದು ಶಾಶ್ ಎಂಬ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದಲ್ಲದೆ, ಚಂದ್ರ ಮತ್ತು ಶುಕ್ರ ಇಬ್ಬರೂ ಮುಖಾಮುಖಿಯಾಗುವುದರಿಂದ ಧನ ಯೋಗ ಸೃಷ್ಟಿಯಾಗುತ್ತಿದೆ. ಇದಲ್ಲದೆ, ಸೂರ್ಯ-ಬುಧ ತುಲಾ ರಾಶಿಯಲ್ಲಿ ಸಂಯೋಜನೆ ಹೊಂದಿ ಶುಭಕರ ಬುದ್ಧಾದಿತ್ಯ ಯೋಗವೂ ನಿರ್ಮಾಣವಾಗಲಿದೆ. ಈ ಎಲ್ಲಾ ಮಂಗಳಕರ ಯೋಗಗಳ ಪರಿಣಾಮವಾಗಿ ಮೂರು ರಾಶಿಯವರಿಗೆ ವಿಶೇಷ ಪ್ರಯೋಜನ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ದಸರಾ ದಿನದಂದು ರೂಪುಗೊಳ್ಳುತ್ತಿರುವ ಮಂಗಳಕರ ಶುಭ ಯೋಗಗಳ ಪರಿಣಾಮವಾಗಿ ವೃಷಭ ರಾಶಿಯವರಿಗೆ ವಿಶೇಷ ಲಾಭವಾಗಲಿದೆ. ಈ ಸಮಯದಲ್ಲಿ ಅನಿರೀಕ್ಷಿತ ಧನ ಲಾಭವಾಗಲಿದ್ದು ನಿಮ್ಮ ಸಂಪತ್ತು ವೃದ್ಧಿಯಾಗಲಿದೆ. ಮಾತ್ರವಲ್ಲ, ಉದ್ಯೋಗ ರಂಗದಲ್ಲಿಯೂ ಉನ್ನತ ಸ್ಥಾನಕ್ಕೇರುವಿರಿ.
ವಿಜಯದಶಮಿಯಲ್ಲಿ ನಿರ್ಮಾಣವಾಗುತ್ತಿರುವ ಶುಭ ಯೋಗಗಳ ಪ್ರಭಾವದಿಂದಾಗಿ ಕರ್ಕಾಟಕ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ. ಹೂಡಿಕೆಯಿಂದ ಒಳ್ಳೆಯ ಲಾಭ ಸಿಗಲಿದೆ. ಮದುವೆಯಾಗದ ಯುವಕ-ಯುವತಿಯರಿಗೆ ನೀವು ಬಯಸಿದ ಬಾಳ ಸಂಗಾತಿ ಸಿಗುವ ಸಾಧ್ಯತೆಯೂ ಇದೆ.
ದಸರಾದಲ್ಲಿ ನಿರ್ಮಾಣವಾಗುತ್ತಿರುವ ಶುಭ ಯೋಗಗಳ ಪರಿಣಾಮದಿಂದಾಗಿ ಸಂಪತ್ತಿನ ದೇವತೆ ತಾಯಿ ಮಹಾಲಕ್ಷ್ಮೀ ತುಲಾ ರಾಶಿಯವರಿಗೆ ದಯೆ ತೋರಲಿದ್ದಾಳೆ. ಇಡಿರಿಂದಾಗಿ ಇಷ್ಟು ದಿನಗಳ ನಿಮ್ಮ ಹಣಕಾಸಿನ ಸಮಸ್ಯೆಯಿಂದ ನೀವು ಹೊರಬರಲು ಅನುಕೂಲವಾಗಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಯೋಗವೂ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.