ಆರೋಗ್ಯಕರವಾಗಿ ತೂಕ ಇಳಿಸಲು ಸರಳ ಸಲಹೆ
ದೇಹದಲ್ಲಿ ಕೊಬ್ಬು ಹೆಚ್ಚಾದರೆ ಅದು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ. ಕೆಲವು ಸಸ್ಯ ಆಧಾರಿತ ಆಹಾರಗಳು, ಆರೋಗ್ಯಕರ ಕೊಬ್ಬುಗಳು, ಕೊಬ್ಬನ್ನು ಸುಡುವ ಪಾನೀಯಗಳು ಮತ್ತು ಕಡಿಮೆ-ಕೊಬ್ಬಿನ ಡೈರಿ ಉತ್ಪನ್ನಗಳನ್ನು ತಿನ್ನುವ ಮೂಲಕ, ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.
ಹಣ್ಣುಗಳು: ಕಿತ್ತಳೆ, ಪೇರಳೆ, ಸೇಬುಗಳು, ಬಾಳೆಹಣ್ಣುಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ಹಣ್ಣಿನ ತಾಜಾ ಪಾನೀಯಗಳು ಸಹ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕ ನಿಯಂತ್ರಣಕ್ಕಾಗಿ ನೀವು ನಿಮ್ಮ ಡಯಟ್ನಲ್ಲಿ ಈ ಹಣ್ಣುಗಳನ್ನು ತಪ್ಪದೇ ಸೇರಿಸಿ.
ಸೊಪ್ಪು ಮತ್ತು ತರಕಾರಿಗಳು: ಕೋಸುಗಡ್ಡೆ, ಕ್ಯಾರೆಟ್, ಹಸಿರು ತರಕಾರಿಗಳು ಮತ್ತು ಪಾಲಕ್ ಸೊಪ್ಪು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.
ವ್ಯಾಯಾಮ: ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರದ ಜೊತೆಗೆ ಲಘು ವ್ಯಾಯಾಮವೂ ಬಹಲ್ ಮುಖ್ಯ. ದೈಹಿಕ ವ್ಯಾಯಾಮ ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳ ಸಹಾಯಕವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.