ಓಟಿಟಿಯಲ್ಲಿ ಬರೋಬ್ಬರಿ ಆರು ಸಿನಿಮಾ ರಿಲೀಸ್‌; ಈ ವೀಕೆಂಡ್‌ಗೆ ಸಿನಿಮಾಗಳ ಹಬ್ಬ

Wed, 24 May 2023-10:52 am,

ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ : ಸಲ್ಮಾನ್‌ ಖಾನ್‌, ಪೂಜಾ ಹೆಗ್ಡೆ, ನಟಿನೆಯ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾ ಓಟಿಟಿಯಲ್ಲಿ ರಲೀಸ್‌ ಆಗುತ್ತಿದೆ. ಈ ಸಿನಿಮಾ ವೀರಂ ಸಿನಿಮಾದ ರಿಮೇಕ್‌ ಆಗಿದ್ದರೂ, ಬಾಲಿವುಡ್‌ ಪ್ರೇಕ್ಷಕರಿಗೆ ತಕ್ಕಂತೆ ಸಿನಿಮಾ ಮಾಡಲಾಗಿದೆ. ಆದರೆ ಥಿಯೇಟರ್‌ನಲ್ಲಿ ಈ ಸಿನಿಮಾ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಈಗ ಇದೇ ಸಿನಿಮಾ ಓಟಿಟಿಯಲ್ಲಿ ಸೆಟ್ಟೆರಲಿದ್ದು, ಮೇ26ರಂದು ಜೀ5 ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.   

ಭೇಡಿಯಾ : ವರುಣ್‌ ಧವನ್‌, ಕೃತಿ ಸಾನೋನ್‌, ಅಭಿನಯದ ಈ ಸಿನಿಮಾ ಬಾಲಿವುಡ್‌ನ ಹಾರರ್‌ ಕಮ್‌ ಕಾಮಿಡಿ ಸಿನಿಮಾ ಆಗಿದ್ದು, ಇದೇ ವಾಋ ಓಟಿಟಿಯಲ್ಲಿ ರಿಲೀಸ್‌ ಆಗಲಿದೆ. ಮೇ26ಕ್ಕೆ ಜಿಯೋ ಸಿನಿಮಾದಲ್ಲಿ ಸೆಟ್ಟೆರಲಿದೆ.   

ಮಿಸ್ಸಿಂಗ್‌ : ಈ ಸಿನಿಮಾ ಅಮೆರಿಕಾದ ಥ್ರಿಲ್ಲರ್‌ ಸಿನಿಮಾ ಆಗಿದ್ದು, ವಿಲ್‌ ಮೆರ್ರಿಕ್‌, ನಿಕ್ಸ್‌ ಜಾನ್ಸನ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೊಲಂಬೊದಲ್ಲಿ ನಾಯಕಿಯ ತಾಯಿಯ ಹೊಸ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋದಾಗ ಕಾಣೆಯಾಗುತ್ತಾರೆ. ಅವರನ್ನು ಹುಡುಕಲು ಹೋದಾಗ ಆಗುವ ತೊಂದರೆಗಳನ್ನು ಈ ಸಿನಿಮಾದಲ್ಲಿ  ತೋರಿಸಲಾಗಿದೆ. ಈ ಸಿನಿಮಾ ಇದೀಗ ಓಟಿಟಿಯಲ್ಲಿ ಸೆಟ್ಟೆರಲಿದ್ದು, ಮೇ26ಕ್ಕೆ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.   

ಮದರ್ಸ್‌ ಡೇ : ಈ ಸಿನಿಮಾ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಮೇ26 ಕ್ಕೆ ನೆಟ್ ಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ.   

ವಿಕ್ಟಿಮ್‌ ಸಸ್ಪೆಕ್ಟ್‌ : ಇದು ಪಕ್ಕಾ ಕ್ರೈಂ ಥ್ರಿಲ್ಲರ್‌ ಸಿನಿಮಾ ಆಗಿದ್ದು, ನ್ಯಾನ್ಸಿ ಶ್ವಾರ್ಟ್ಜ್‌ಮನ್‌ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇಂದು (ಮೇ23) ನೆಟ್ ಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ.    

ಟೆನ್‌ & ಟೀನಾ : ಇದೊಂದು ಸೈಕಾಲಜಿಕಲ್‌ ಹಾರರ್‌ ಥ್ರಿಲ್ಲರ್‌ ಸಿನಿಮಾ. ಈ ಸಿನಿಮಾವನ್ನು ರಾಬಿನ್‌ ಸ್ಟೈನ್‌ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೇ24ರಂದು ನೆಟ್ ಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link