ಗೆಳತಿಯರಾಗಿದ್ದ ಅನುಷ್ಕಾ ಶರ್ಮಾ- ರಿತಿಕಾ ಸಜ್ದೇಹ್ ಮಧ್ಯೆ ಜಗಳ!? ಕೊಹ್ಲಿ-ರೋಹಿತ್ ಮಡದಿಯರ ವೈಮನಸ್ಸಿಗೆ ಕಾರಣ...
ಸದ್ಯ ಇಂದಿನಿಂದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಎಲ್ಲದರ ಮಧ್ಯೆ ಇವರಿಬ್ಬರ ಮಡದಿಯರಿಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಂದು ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ನಡುವೆ ವೈಮನಸ್ಸು ಇತ್ತೆಂದು ಈ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಆ ದ್ವೇಷ ಇದೀಗ ಗೆಳೆತನವಾಗಿ ಮಾರ್ಪಾಡಾಗಿದೆ ಎಂಬುದನ್ನು ಕೂಡ ಇಲ್ಲಿ ಹೇಳಲಾಗಿದೆ.
2019 ರಲ್ಲಿ, ರೋಹಿತ್ ಇನ್ʼಸ್ಟಾದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಅನ್‌ಫಾಲೋ ಮಾಡಿದ್ದರು. ಇದಾದ ನಂತರ ಕೊಹ್ಲಿ ಮತ್ತು ಅನುಷ್ಕಾ ಕೂಡ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಈ ವದಂತಿಗೆ ಪುಷ್ಟಿ ನೀಡಿದ್ದರು. 6 ವರ್ಷಗಳ ಹಿಂದೆ ರವಿಶಾಸ್ತ್ರಿ ಭಾಗಿಯಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಿತಿಕಾ ಮತ್ತು ಅನುಷ್ಕಾ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.
ಆ ಸಂದರ್ಭದಲ್ಲಿ ರಿತಿಕಾ ಮತ್ತು ಅನುಷ್ಕಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ತೀರಾ ಅಪರೂಪ. ಇಬ್ಬರೂ ಕ್ರೀಡಾಂಗಣದಲ್ಲಿ ಇದ್ದರೂ ಸಹ ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಿದ್ದರು. ಇವುಗಳಿಗೆ ಸಂಬಂಧಿಸಿದ ಅದೆಷ್ಟೋ ವಿಡಿಯೋ-ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಆದರೆ ಇದೀಗ ಇವರಿಬ್ಬರ ಮಧ್ಯೆ ದ್ವೇಷ ಮಾಸಿದಂತಿದೆ. ಸ್ಟೇಡಿಯಂನಲ್ಲಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಇವರಿಬ್ಬರ ಈ ವೈಮನಸ್ಸಿಗೆ ಕಾರಣ ವಿರಾಟ್ ಮತ್ತು ರೋಹಿತ್ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯ ಎಂದು ಹೇಳಲಾಗುತ್ತಿದೆ. ಆದರೆ ನಿಖರವಾದ ಮಾಹಿತಿ ಲಭ್ಯವಿಲ್ಲ.