Divorce Photoshoot: ಡಿವೋರ್ಸ್ ಖುಷಿಯನ್ನು ಅದ್ಧೂರಿಯಾಗಿ ಆಚರಿಸಿ ಫೋಟೋಶೂಟ್ ಮಾಡಿಸಿಕೊಂಡ ಯುವತಿ! ಫೋಟೋಸ್ ನೋಡಿ
ಮದುವೆಯಾದ ಬಳಿಕ ಡಿವೋರ್ಸ್ ತೆಗೆದುಕೊಳ್ಳುವುದು ಸಾಮಾನ್ಯದ ವಿಷಯವಲ್ಲ. ಇಂತಹ ಘಟನೆಗಳು ಮಾನಸಿಕವಾಗಿ ಪರಿಣಾಮ ಬೀರಬಹುದು. ಆದರೆ ಇಲ್ಲೊಬ್ಬ ಮಹಿಳೆ ತನ್ನ ವೈವಾಹಿಕ ಜೀವನದ ಅಂತ್ಯ ಹೇಳಿ, ಆ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದಾಳೆ. ಜೊತೆಗೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾಳೆ
ಈ ವಿಚ್ಛೇದಿತ ಮಹಿಳೆಯ ಹೆಸರು ಲಾರೆನ್ ಬ್ರೂಕ್. ದೌರ್ಜನ್ಯವೆಸಗಿದ ಪತಿಯಿಂದ ವಿಚ್ಛೇದನ ಪಡೆದು ಒಂದು ವರ್ಷವಾಯಿತಂತೆ. ಇದೇ ಕಾರಣದಿಂದ ಆಕೆ ಕೆಂಪು ಡ್ರೆಸ್ ಹಾಕಿಕೊಂಡು ಫೋಟೋ ಶೂಟ್ ಕೂಡ ಮಾಡಿಸಿ ಸಂತಸ ಹೊರಹಾಕಿದ್ದಾರೆ.
ಈ ದಿನವನ್ನು ಆಚರಣೆ ಮಾಡಲು ತನ್ನ ತಾಯಿಯ ಮತ್ತು ಸ್ನೇಹಿತರ ಸಹಾಯವನ್ನೂ ಪಡೆದಿದ್ದಾಳೆ. ಲಾರೆನ್ ಶೇರ್ ಮಾಡಿರುವ ಫೋಟೋಗಳು ನೆಟ್ಟಿಗರ ಮನಸೆಳೆದಿವೆ.
ಈ ಫೋಟೋಗಳಲ್ಲಿ ಒಂದರಲ್ಲಿ ತನ್ನ ಮದುವೆಯ ಡ್ರೆಸ್ ಮೇಲೆ ನಿಂತು ಶಾಂಪೇನ್ ಬಾಟಲಿಯನ್ನು ಓಪನ್ ಮಾಡುತ್ತಿದ್ದರೆ, ಮತ್ತೊಂದರಲ್ಲಿ ಮದುವೆ ಉಡುಪಿನ ಭಾಗವಾಗಿದ್ದ ಮುಸುಕಿನಂತಹ ವಸ್ತ್ರಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು.
ಇನ್ನೊಂದು ಚಿತ್ರದಲ್ಲಿ, ತನ್ನ ಮದುವೆಯ ಫೋಟೋ ಫ್ರೇಮ್ ಅನ್ನು ಹರಿದು ಹಾಕುತ್ತಿರುವುದನ್ನು ಕಾಣಬಹುದು.
"ಜೀವನದಲ್ಲಿ ಅತ್ಯುತ್ತಮ ದಿನಗಳು ಬರಲೆಂದು ಬಯಸುತ್ತೇನೆ, ಆದರೆ ಅದು ಈಗಾಗಲೇ ಬಂದು ಹೋಗಿದೆ" ಎಂದು ಈ ಪೋಸ್ಟ್’ಗೆ ಶೀರ್ಷಿಕೆ ಹಾಕಿದ್ದಾರೆ.
ಇದರ ಜೊತೆಗೆ ಮತ್ತೊಂದು ಸಂದೇಶ ಬರೆದಿರುವ ಅವರು, “ಕಳೆದ ವರ್ಷವು ಕಠಿಣವಾಗಿತ್ತು, ವಿಚ್ಛೇದನ ಪಡೆಯುವುದು ದೊಡ್ಡ ಸವಾಲಾಗಿತ್ತು. ಅಂತಿಮವಾಗಿ ಬಯಸಿದ ಸಂತೋಷ ಬಂದಿದೆ. ಜೀವನದಲ್ಲಿ ಸರಿಯಾದ ಪಾಠಗಳನ್ನು ಕಲಿಸಿದ್ದಕ್ಕಾಗಿ ಧನ್ಯವಾದಗಳು ದೇವರೇ ” ಎಂದು ಹೇಳಿದ್ದಾರೆ.
@Pubity ಎಂಬ ಇನ್’ಸ್ಟ್ರಾಗ್ರಾಂ ಪೇಜ್’ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಲೈಕ್ ಮತ್ತು ಕಮೆಂಟ್’ಗಳ ಮಹಾಪೂರವನ್ನೇ ಹರಿಸಿದ್ದಾರೆ.