Aadhaar Card ವಂಚನೆಯಿಂದ ಪಾರಾಗಲು ಪ್ರತಿಯೊಬ್ಬರಿಗೂ ತಿಳಿದಿರಬೇಕು ಈ ಐದು ಸಂಗತಿಗಳು!
ಝೆರಾಕ್ಸ್ ಮಾಡುವಾಗ ಎಚ್ಚರವಹಿಸಿ: ನಿಮ್ಮ ಆಧಾರ್ ಕಾರ್ಡಿನ ಝೆರಾಕ್ಸ್ ಕಾಪಿ ಮಾಡುವಾಗ ಎಚ್ಚರವಹಿಸಿ. ಝೆರಾಕ್ಸ್ ಅಂಗಡಿಯಲ್ಲಿ ನಿಮ್ಮ ಆಧಾರ್ ಝೆರಾಕ್ಸ್ ಎಲ್ಲಿಯೂ ಉಳಿದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ, ವಂಚನೆ ಎಸಗಲು ಯಾರಾದರೂ ಈ ನಕಲು ಪ್ರತಿ ಬಳಸಬಹುದು.
ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ: ಆಧಾರ್ ಕಾರ್ಡ್ ನಿಂದ ಎಸಗಲಾಗುವ ವಂಚನೆಗಳನ್ನು ತಪ್ಪಿಸಲು ಮತ್ತೊಂದು ಸುಲಭ ಮಾರ್ಗವೆಂದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿ. ಹೊಸ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಯಾವಾಗಲೂ ನವೀಕರಿಸಿ. ಅಲ್ಲದೆ, ನೀವು ಎಂದಾದರೂ ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ, ತಕ್ಷಣವೇ ಈ ಕುರಿತುUIDAI ವೆಬ್‌ಸೈಟ್‌ಗೆ ಹೋಗಿ ವರದಿ ಸಲ್ಲಿಸಿ.
ಆಧಾರ್ ಕಾರ್ಡ್ ಬಳಸುವಾಗ ಎಚ್ಚರಿಕೆವಹಿಸಿ: ವಂಚನೆಗಳನ್ನು ತಪ್ಪಿಸಲು, ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸುವಾಗ ಸಾಕಷ್ಟು ಎಚ್ಚರದಿಂದ ಇರಿ. ನೀವು ಯಾವುದೇ ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬಾರದು. ನೀವು ವಿಶ್ವಾಸಾರ್ಹ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಮಾತ್ರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಇದಲ್ಲದೆ ಆಧಾರ್ ಕಾರ್ಡ್ ಆಧಾರಿತ ವಹಿವಾಟುಗಳನ್ನು ನಡೆಸುವಾಗಲೂ ಕೂಡ ನೀವು ಸಾಕಷ್ಟು ಎಚ್ಚರವಹಿಸಬೇಕು.
UIDAI ವೆಬ್‌ಸೈಟ್‌ನಿಂದ ಮಾತ್ರ ಮಾಹಿತಿ ಪಡೆಯಿರಿ:ನೀವು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ನಿಮಗೆ ಬೇಕಾದರೆ ಅಥವಾ ನಿಮ್ಮ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಅವುಗಳನ್ನು ಪರಿಹರಿಸಲು. UIDAI ವೆಬ್‌ಸೈಟ್‌ಗೆ ಭೇಟಿ ನೀಡಬೇಕು. UIDAI ವೆಬ್‌ಸೈಟ್‌ನಲ್ಲಿ ನಿಮಗೆ ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ಇರುತ್ತದೆ..
ಆಧಾರ್ ಕಾರ್ಡ್ ಹೆಲ್ಪ್ಲೈನ್ ಗೂ ಸಂಪರ್ಕಿಸಬಹುದು: ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಮಾಹಿತಿ ಬೇಕಾಗಿದ್ದಾರೆ, ನೀವು UIDAI ಸಹಾಯವಾಣಿ ಸಂಖ್ಯೆಯಾಗಿರುವ 1947 ಕ್ಕೆ ಕರೆ ಮಾಡಿ ಕೇಳಬಹುದು. ಇದಲ್ಲದೆ, ಆಧಾರ್ ಮಿತ್ರ ಅನ್ನು ಕೂಡ ನೀವು ಸಂಪರ್ಕಿಸಬಹುದು ಆಧಾರ್ ಮಿತ್ರ ಒಂದು ಚಾಟ್‌ಬಾಟ್ ವ್ಯವಸ್ಥೆಯಾಗಿದ್ದು, ಇದನ್ನು UIDAI ಆರಂಭಿಸಿದೆ. ನಿಮ್ಮ ಆಧಾರ್ ಸಂಬಂಧಿತ ಪ್ರಶ್ನೆಗಳಿಗೆ ಕಂಡುಹಿಡಿಯಲು ಈ ಚಾಟ್‌ಬಾಟ್ ನಿಮಗೆ ಸಹಾಯ ಮಾಡುತ್ತದೆ.