ನಟ ಅಮೀರ್‌ ಖಾನ್‌ಗೆ ಪತ್ರಕರ್ತೆ ಜೊತೆ ಅಫೇರ್!‌ ಪ್ರೀತಿಸಿ ಬಳಿಕ ಅಬಾರ್ಷನ್ ಮಾಡಿಸು ಅಂದ್ರಾ ಬಾಲಿವುಡ್‌ ಮಿಸ್ಟರ್ ಪರ್ಫೆಕ್ಟ್?‌

Mon, 01 Apr 2024-12:17 pm,

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಎರಡು ಬಾರಿ ಮದುವೆಯಾಗಿದ್ದು, ಎರಡನೇ ಮದುವೆ ಕೂಡ ವಿಚ್ಛೇದನದಲ್ಲೇ ಕೊನೆಗೊಂಡಿದೆ. ಅಮೀರ್ ಖಾನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಐರಾ ಖಾನ್ ಮತ್ತು ಮಗ ಆಜಾದ್. 

ಸುಮಾರು 5 ವರ್ಷಗಳ ಹಿಂದೆ ಅಮೀರ್ ಖಾನ್ 'ಕಾಫಿ ವಿತ್ ಕರಣ್' ಶೋ ಗೆ ಬಂದಾಗ, ಕರಣ್ ಜೋಹರ್ ಅವರು ಯಾರಿಗಾದರೂ ಸಂಬಂಧದಲ್ಲಿ ಮೋಸ ಮಾಡಿದ್ದೀರಾ ಅಥವಾ ಒಂದೇ ಸಮಯದಲ್ಲಿ ಇಬ್ಬರೊಂದಿಗೆ ಡೇಟಿಂಗ್ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದರು.

ಅಮೀರ್ ಆ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದರು. ತನ್ನ ಹೆಂಡತಿಗೆ ಆಗಾಗ್ಗೆ ಸುಳ್ಳು ಹೇಳುವುದನ್ನು ಒಪ್ಪಿಕೊಂಡಿದ್ದರು. ಆದರೆ ತಾನು ಯಾರಿಗೆ ಮೋಸ ಮಾಡಿದ್ದೇನೆ ಎಂಬ ಸಂಗತಿಯನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. 

ಅಮೀರ್ ಖಾನ್‌ಗೆ ಬ್ರಿಟಿಷ್ ಪತ್ರಕರ್ತೆಯೊಂದಿಗೆ ಸಂಬಂಧವಿತ್ತು ಎಂಬ ವಿಚಾರ ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕಿತ್ತು. ಪತ್ರಕರ್ತೆ ಜೆಸ್ಸಿಕಾ ಮತ್ತು ಅಮೀರ್ ಗುಲಾಮ್ ಸಿನಿಮಾ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇಲ್ಲಿಂದ ಅವರ ಮಧ್ಯೆ ಪ್ರೇಮ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದರು. ಅಮೀರ್ ಜೊತೆ ಬಹಳ ಕಾಲ ಸಂಬಂಧದಲ್ಲಿದ್ದ ಜೆಸ್ಸಿಕಾ ತಾನು ಅಮೀರ್ ನ ಮಗುವಿನ ತಾಯಿಯಾಗಲಿದ್ದರು ಎಂದು ಹೇಳಲಾಗುತ್ತದೆ.

ಜೆಸ್ಸಿಕಾ ತಾನು ಅಮೀರ್ ಜೊತೆ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಈ ಸಮಯದಲ್ಲಿ ಜೆಸ್ಸಿಕಾ  ಗರ್ಭಿಣಿಯಾಗಿದ್ದರು ಎನ್ನಲಾಗುತ್ತದೆ. 

ಇದನ್ನು ಯಾರಿಗೂ ಹೇಳದೆ ಮಗುವಿಗೆ ಅಬಾರ್ಷನ್‌ ಮಾಡಿಸು ಎಂದು ಅಮೀರ್ ಸಲಹೆ ನೀಡಿದ್ದರಂತೆ ಎಂದು ಜೆಸ್ಸಿಕಾ ಆರೋಪಿಸಿದ್ದರು. ಜೆಸ್ಸಿಕಾ ಅಬಾರ್ಷನ್‌ ಮಾಡಿಸಲು ಒಪ್ಪಲಿಲ್ಲ. ನಂತರ ಅವರು ಲಂಡನ್‌ಗೆ ಹೋದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link