Aamir Khan: ಗೋಲಗಪ್ಪ ಸವಿದ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್, ಫೋಟೋ ವೈರಲ್
ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಟ್ರೈಲರ್ ಪೂರ್ವವೀಕ್ಷಣೆ ಕಾರ್ಯಕ್ರಮದ ವೇಳೆ ಗೋಲಗಪ್ಪ ಸವಿದಿದ್ದಾರೆ.
ಅಮೀರ್ ಖಾನ್ ಬಿಳಿ ಟಿ-ಶರ್ಟ್, ಹಾರೆಮ್ ಪ್ಯಾಂಟ್ ಮತ್ತು ಅದರ ಮೇಲೆ ಗುಲಾಬಿ ಶರ್ಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದರ ಜೊತೆ ಕಂದು ಬಣ್ಣದ ಬೂಟುಗಳು ಮತ್ತು ಅವರ ಕೂಲಿಂಗ್ ಗ್ಲಾಸ್ ಧರಿಸಿದ್ದರು.
ಈ ವಿಶೇಷ ಸಮಾರಂಭದಲ್ಲಿ ಅಮೀರ್ ಖಾನ್ ಪುತ್ರಿ ಇರಾ ಖಾನ್ ಕೂಡ ಭಾಗವಹಿಸಿದ್ದರು. ಇರಾ ಖಾನ್, ಅಮೀರ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು.
'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಿರ್ದೇಶಕ ಅದ್ವೈತ್ ಚಂದನ್ ಮತ್ತು ಅಮೀರ್ ಖಾನ್ ಈ ವೇಳೆ ಕ್ಯಾಮರಾಗೆ ಪೋಸ್ ನೀಡಿದರು.
ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.