Aamir Khan: ನಟ ಅಮೀರ್ ಖಾನ್ ಮೂರನೇ ಮದುವೆ! ಯಾರು ಈ ಚೆಲುವೆ?
ಕಪಿಲ್ ಶರ್ಮಾ ಶೋನಲ್ಲಿ, ನಟ ಅಮೀರ್ ಖಾನ್ ಅನೇಕ ಪ್ರಶ್ನೆಗಳಿಗೆ ಇಂತಹ ತಮಾಷೆಯ ಉತ್ತರಗಳನ್ನು ನೀಡಿದ್ದಾರೆ. ಆದರೆ ಈ ಎಲ್ಲಾ ಪ್ರಶ್ನೆಗಳ ನಡುವೆ ಸುದ್ದಿ ಮಾಡುತ್ತಿರುವುದೆಂದರೆ ಅದು ಅವರ ಮೂರನೇ ಮದುವೆಯ ವಿಚಾರ.
'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನಲ್ಲಿ, ಕಪಿಲ್ ಶರ್ಮಾ ಅಮೀರ್ ಖಾನ್‌ಗೆ ಮೂರನೇ ಮದುವೆ ಬಗ್ಗೆ ಪ್ರಶ್ನೆಯನ್ನು ಕೇಳಿದರು.
ಕಪಿಲ್ ಅವರ ಈ ಪ್ರಶ್ನೆಗೆ ನಟ ಅಮೀರ್ ಖಾನ್ ಉತ್ತರಿಸುವ ಬದಲು ಜೋರಾಗಿ ನಗಲು ಪ್ರಾರಂಭಿಸಿದರು. ಅಮೀರ್ ಅವರ ಈ ನಗುವಿನಲ್ಲೇ ಉತ್ತರ ಅಡಗಿತ್ತು. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅಮೀರ್ ಖಾನ್ ಒಂದಲ್ಲ ಎರಡು ಬಾರಿ ಮದುವೆಯಾಗಿದ್ದಾರೆ. ಅಮೀರ್ ಮೊದಲು ರೀನಾ ದತ್ತಾ ಅವರನ್ನು ವಿವಾಹವಾದರು. ಅವರಿಗೆ ಜುನೈದ್ ಮತ್ತು ಆಯ್ರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ರೀನಾ ಜೊತೆ ವಿಚ್ಛೇದನದ ನಂತರ ಕಿರಣ್ ರಾವ್ ಅವರನ್ನು ವಿವಾಹವಾದರು. ಆಜಾದ್ ಎಂಬ ಮಗನನ್ನು ಪಡೆದರು. ಆದರೆ ಈ ಮದುವೆಯೂ ವಿಚ್ಛೇದನದಲ್ಲೇ ಕೊನೆಯಾಯಿತು.
ಇದೀಗ ಕಪಿಲ್ ಮೂರನೇ ಮದುವೆ ಬಗ್ಗೆ ಪ್ರಶ್ನಿಸಿದಾಗ ಅಮಿರ್ ಶಾಕ್ ಆಗಿದ್ದಾರೆ. ಅವರು ತಮ್ ನಗುವಿನಿಂದಲೇ ಅದನ್ನು ಅಲ್ಲಗಳೆದಿದ್ದಾರೆ.