ಐಶ್ವರ್ಯಾ ರೈ ಆಪ್ತನ ಮಗನೊಂದಿಗೆ ಆರಾಧ್ಯ ಕುಚಿಕು!?‌ 13 ವರ್ಷ ಹಿರಿಯನ ಜೊತೆ ಖುದ್ದಾಗಿ ಮುಂದೆ ನಿಂತು ವಿವಾಹ ಮಾಡಿಸಿದ ಅಮಿತಾಬ್ ಬಚ್ಚನ್... ಫೋಟೋ ವೈರಲ್‌

Sat, 26 Oct 2024-3:52 pm,

ಸಾಮಾನ್ಯವಾಗಿ ಸ್ಟಾರ್‌ ನಟರ ಅಥವಾ ಅವರ ಕುಟುಂಬಗಳಿಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿಯಾಗಿ ವೈರಲ್‌ ಆಗುತ್ತಲೇ ಇರುತ್ತವೆ. ಕೆಲವೊಂದು ಬಾರಿ ಅತಿರೇಕವಾಗಿ ವೈರಲ್‌ ಆಗುವುದೂ ಉಂಟು. ಇದೀಗ ಅಂತಹದ್ದೇ ಒಂದು ಅತಿರೇಕವಾಗಿ ಫೋಟೋವೊಂದು ವೈರಲ್‌ ಆಗಿದೆ.

ಆ ಫೋಟೋದಲ್ಲಿ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ದಂಪತಿಯ ಪುತ್ರಿಯ ಫೋಟೋ ಇದೆ. ಇನ್ನು ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಫ್ಯಾನ್ಸ್‌ ಮಾತ್ರವಲ್ಲ, ನೆಟ್ಟಿಗರು ಗರಂ ಆಗಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ.

 

ವೈರಲ್‌ ಆಗಿರುವ ಈ ಫೋಟೋದಲ್ಲಿ, ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಮತ್ತು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ವಿವಾಹವಾಗುತ್ತಿರುವ ಮಾರ್ಫ್‌ ಮಾಡಿರುವ ಫೋಟೋಗಳನ್ನು ಹರಿಬಿಡಲಾಗಿದೆ.   

 

ಆರ್ಯನ್ ಖಾನ್ ಇತ್ತೀಚೆಗೆ ಲಾರಿಸ್ಸಾ ಬೊನೆಸಿ ಎಂಬಾಕೆ ಜೊತೆಗಿನ ಸಂಬಂಧದಿಂದಾಗಿ ಸುದ್ದಿಯಲ್ಲಿದ್ದರು. ಇನ್ನೊಂದೆಡೆ ಇದೀಗ ಆರಾಧ್ಯ ಬಚ್ಚನ್ ಮತ್ತು ಆರ್ಯನ್ ಖಾನ್ ಅವರ ಕೆಲವು ಚಿತ್ರಗಳನ್ನು ರೆಡ್ಡಿಟ್‌ನ ಪೇಜ್‌ ಒಂದರಲ್ಲಿ ಹರಿದಾಡಿದೆ.   

 

ಇಬ್ಬರು ಸ್ಟಾರ್ ಮಕ್ಕಳ ಮುಖವನ್ನು ಬಳಸಿ ಈ ಚಿತ್ರಗಳನ್ನು ತಯಾರು ಮಾಡಲಾಗಿದ್ದು, ಇದರಲ್ಲಿ ಆರಾಧ್ಯ ವಧುವಾಗಿ ಮತ್ತು ಆರ್ಯನ್ ವರನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರಿಬ್ಬರ ಕುಟುಂಬದ ಸದಸ್ಯರು ಅಂದರೆ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಜಯಾ ಬಚ್ಚನ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.   

 

ಇನ್ನೊಂದು ಫೋಟೋವನ್ನು ಕೂಡ ಮಾರ್ಫ್‌ ಮಾಡಲಾಗಿದ್ದು, ಅದರಲ್ಲಿ ವಸ್ತ್ರ ವಿನ್ಯಾಸಕಾರ ಮನೀಶ್‌ ಮಲ್ಹೋತ್ರಾ ಫೋಟೋಗೆ ಆರ್ಯನ್‌ ಮುಖವನ್ನು ಮಾರ್ಫ್‌ ಮಾಡಿ, ಆರಾಧ್ಯ ಜೊತೆ ನಿಂತಂತೆ ಮಾಡಲಾಗಿದೆ. ಜೊತೆಗೆ ಈ ಫೋಟೋದಲ್ಲಿ ನಟಿ ಐಶ್ವರ್ಯಾ ರೈ ಮತ್ತು ರೇಖಾ ಕೂಡ ಇದ್ದಾರೆ.   

 

ಕೇವಲ 13 ವರ್ಷದ ಆರಾಧ್ಯ ಬಚ್ಚನ್ ಮತ್ತು 26 ವರ್ಷದ ಆರ್ಯನ್ ಖಾನ್ ಅವರ ಈ ಮಾರ್ಫ್ ಮಾಡಿದ ಚಿತ್ರಗಳನ್ನು ನೋಡಿ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಕೋಪಗೊಂಡಿದ್ದಾರೆ.

 

ಈ ಹಿಂದೆ ಆರಾಧ್ಯ ಆರೋಗ್ಯದ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹರಿಬಿಟ್ಟಿದ್ದ ಪೇಜ್‌ಗಳ ವಿರುದ್ಧ ಬಚ್ಚನ್‌ ಫ್ಯಾಮಿಲಿ ಕಾನೂನು ಕ್ರಮ ಕೈಗೊಂಡಿತ್ತು. ಇದೀಗ ಇಂತಹ ನಾಚಿಕೆಗೇಡಿನ ಕೃತ್ಯ ಎಸಗಿರುವ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link