ಅಮ್ಮನ ಕೊನೆಯಾಸೆ ಈಡೇರಿಸಲು ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇವರಿದ್ದೀಗ ಮೂವರು ಮಕ್ಕಳ ಸಂಸಾರ
ಸೆಲೆಬ್ರಿಟಿಗಳಲ್ಲಿ ಕೆಲವರ ಬದುಕು ಇನ್ನೊಬ್ಬರಿಗೆ ಮಾದರಿ ಎನ್ನುವಂತೆ ಇರಬಹುದು. ಅದೇ ಇನ್ನು ಕೆಲವರ ಜೀವನ ಹುಬ್ಬೇರಿಸುವಂತೆಯೂ ಇರಬಹುದು.
ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ ಈ ಆಟಗಾರ ವೈಯಕ್ತಿಕ ಜೀವನ ಕೂಡಾ ಹಾಗೆಯೇ. ಕೇಳುಗರನ್ನು, ನೋಡುಗರನ್ನು ಆಶ್ಚರ್ಯಗೊಳಿಸುತ್ತದೆ. ಇವರ ಜೀವನ ಕತೆಯನ್ನು ಭಿನ್ನವಾಗಿಸಿದ್ದೇ ಅವರ ವಿವಾಹ .
ಹೌದು, ಪಾಕಿಸ್ತಾನದ ಅತ್ಯುತ್ತಮ ಆಲ್‌ರೌಂಡರ್ ಗಳಲ್ಲಿ ಒಬ್ಬರಾಗಿದ್ದ ಅಬ್ದುಲ್ ರಜಾಕ್ ಮದುವೆಯಾಗಿದ್ದು ಅವರ ಸಹೋದರಿಯನ್ನೇ. ಇನ್ನು ಇವರಿಬ್ಬರ ವಯಸ್ಸಿನ ನಡುವೆ ದೊಡ್ಡ ಮಟ್ಟದ ಅಂತರವೂ ಇದೆ.
ಇಲ್ಲಿ ವಿಶೇಷವೆಂದರೆ ಆಯೇಷಾಳನ್ನು ಮದುವೆಯಾಗಬೇಕು ಎನ್ನುವುದು ಅಬ್ದುಲ್ ರಜಾಕ್ ಆಸೆಯಾಗಿರಲಿಲ್ಲ. ಬದಲಾಗಿ ಇದು ಅಬ್ದುಲ್ ರಜಾಕ್ ತಾಯಿಯ ಆಸೆಯಾಗಿತ್ತು.
ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತನ್ನ ತಂಗಿಯ ಮಗಳಾದ ಆಯೆಷಾಳನ್ನೇ ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ. ಈ ಬಗ್ಗೆ ಅಬ್ದುಲ್ ರಜಾಕ್ ನೀಡಿದ ವಿವರಣೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.
ಮದುವೆಯ ಸಮಯದಲ್ಲಿ ಆಯೇಷಾ ತುಂಬಾ ಚಿಕ್ಕವಳಾಗಿದ್ದಳು ಎಂದು ಅಬ್ದುಲ್ ರಜಾಕ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ತಾಯಿಯ ಕೊನೆ ಆಸೆ ಈಡೇರಿಸಬೇಕು ಎನ್ನುವ ಕಾರಣಕ್ಕೆ ತನಗಿಂತ ಬಹಳ ಕಿರಿಯವಳಾದ ಆಯೆಷಾಳನ್ನು ವರಿಸುತ್ತಾರೆ ಅಬ್ದುಲ್ ರಜಾಕ್.