ಕರ್ನಾಟಕದ ಯುವ ಆಟಗಾರನ ಮೇಲೆ ಕೋಟಿ ಕೋಟಿ ಸುರಿದ ಕಾವ್ಯಾ ಮಾರನ್..! ಏನಿಕೆಯ ಮಾಸ್ಟರ್ ಪ್ಲಾನ್..?!
Abhinav manohar: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆಕ್ರಮಣಕಾರಿಯಾಗಿ ಕಣಕ್ಕಿಳಿದಿದೆ. ತಮಗೆ ಬೇಕಾದ ಆಟಗಾರರ ಮೇಲೆ ಹಣದ ಹೊಳೆ ಹರಿಸುತ್ತಿದೆ.
30 ಲಕ್ಷದ ಕನಿಷ್ಠ ಬೆಲೆಯೊಂದಿಗೆ ಮೆಗಾ ಹರಾಜಿಗೆ ಪ್ರವೇಶಿಸಿದ ಅಭಿನವ್ ಮನೋಹರ್‌ಗೆ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಆರ್‌ಸಿಬಿ ಮತ್ತು ಕೆಕೆಆರ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ಪೈಪೋಟಿ ನಡೆಸಿತು.
ಆರ್‌ಸಿಬಿ ಮೊದಲು ಬಿಡ್ ಮಾಡಿತು, ನಂತರ ಸಿಎಸ್‌ಕೆ ಮತ್ತು ಗುಜರಾತ್ ಟೈಟಾನ್ಸ್ ರೇಸ್‌ಗೆ ಪ್ರವೇಶಿಸಿದವು.
ಐಪಿಎಲ್ 2022 ರ ಸೀಸನ್‌ನೊಂದಿಗೆ ಕ್ಯಾಶ್ ರಿಚ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್‌ಗಾಗಿ ಪಾದಾರ್ಪಣೆ ಮಾಡಿದ ಅಭಿನವ್ ಮನೋಹರ್ ಇದುವರೆಗೆ 19 ಪಂದ್ಯಗಳನ್ನು ಆಡಿದ್ದಾರೆ ಮತ್ತು 132.76 ಸ್ಟ್ರೈಕ್ ರೇಟ್‌ನೊಂದಿಗೆ 231 ರನ್ ಗಳಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸೆಟ್ಟೇರುವ ಉದ್ದೇಶದಿಂದ ಅಭಿನಂ ಮನೋಹರ್ ಅವರನ್ನು ಸನ್ ರೈಸರ್ಸ್ ಆಯ್ಕೆ ಮಾಡಿದೆ. ಅಭಿನವ್ ಮನೋಹರ್ ಮತ್ತು ಇನ್ನೊಬ್ಬ ಅನಾಮಧೇಯ ಆಟಗಾರ ಅಥರ್ವ ಟೈಡ್ ಅವರ ಕನಿಷ್ಠ ಬೆಲೆ ರೂ. 30 ಲಕ್ಷಕ್ಕೆ ಖರೀದಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ರೂ. 10 ಕೋಟಿಗೆ ಖರೀದಿಸಿದ ಸನ್‌ರೈಸರ್ಸ್ ಇಶಾನ್ ಕಿಶನ್ (ರೂ. 11.25 ಕೋಟಿ) ಮತ್ತು ಹರ್ಷಲ್ ಪಟೇಲ್ (ರೂ. 8 ಕೋಟಿ) ಮೇಲೂ ಕೂಡ ಹಣದ ಮಳೆ ಹರಿಸಿದ್ದಾರೆ.
ಅನಾಮಧೇಯ ಬ್ಯಾಟರ್ ಅಭಿನವ್ ಮನೋಹರ್ ಅವರನ್ನು ಸನ್ ರೈಸರ್ಸ್ ಫ್ರಾಂಚೈಸಿ 3.20 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ, ಹೊಸ ಆಟಗಾರನ ಮೇಲೆ ಭಾರಿ ಮೊತ್ತದ ಹಣ ಹರಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.