6,6,6,6,6,6,6... ಬರೋಬ್ಬರಿ 36 ಸಿಕ್ಸರ್‌ ಸಿಡಿಸಿ ಮಿಂಚಿದ `ಸ್ಟಾರ್‌ ದಾಂಡಿಗ`: ಭಾರತದ ಈ ಕ್ರಿಕೆಟಿಗನ ಅಬ್ಬರ ಕಂಡು ಬೆಕ್ಕಸಬೆರಗಾದ ವಿಶ್ವಕ್ರಿಕೆಟ್ ಲೋಕ

Mon, 26 Aug 2024-2:56 pm,

ಒಂದು, ಎರಡು, ಮೂರು, ನಾಲ್ಕು.... ಲೆಕ್ಕವೇ ಸಿಗದಷ್ಟು ಸಿಕ್ಸರ್‌ ಸುರಿಮಳೆ ಸುರಿಸಿದ ಸ್ಟಾರ್‌ ಕ್ರಿಕೆಟಿಗ ಇಡೀ ವಿಶ್ವ ಕ್ರಿಕೆಟ್‌ ಲೋಕವನ್ನೇ ಬೆರಗುಗೊಳಿಸಿದ್ದಾನೆ. ಆತ ಬೇರಾರು ಅಲ್ಲ, ಅಭಿನವ್ ಮನೋಹರ್. ಮಹಾರಾಜ ಟಿ20 ಟ್ರೋಫಿಯಲ್ಲಿ ಆಡುತ್ತಿರುವ ಈ ಬ್ಯಾಟ್ಸ್‌ʼಮನ್ ಈಗ ಸಿಕ್ಸರ್ ಬಾರಿಸುವ ಮೆಷಿನ್‌ ಏನೋ ಎಂಬಂತೆ ಭಾಸವಾಗುತ್ತಿದೆ.

 

ಈ ಬಾರಿ ಮಹಾರಾಜ ಟಿ20 ಟ್ರೋಫಿಯ ಎರಡನೇ ಸೀಸನ್‌ ನಡೆಯುತ್ತಿದೆ. ಲೀಗ್‌ʼನಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಅಭಿನವ್ ಮನೋಹರ್ 36 ಸಿಕ್ಸರ್‌ʼಗಳನ್ನು ಬಾರಿಸಿದ್ದಾರೆ. ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

 

ಇದುವರೆಗೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ಅಂದರೆ 32 ಸಿಕ್ಸರ್‌ ದಾಖಲಾಗಿತ್ತು. ಮೊಹಮ್ಮದ್ ತಾಹಾ ಎಂಬವರು ಮೊದಲ ಋತುವಿನಲ್ಲಿ 32 ಸಿಕ್ಸರ್‌ʼಗಳನ್ನು ಬಾರಿಸಿದ್ದರು. ಆದರೆ, ಈ ಬಾರಿ ಅಭಿನವ್ ಮನೋಹರ್ 36 ಸಿಕ್ಸರ್‌ ಬಾರಿಸಿದ್ದಾರೆ.

 

ಮಹಾರಾಜ ಟಿ20 ಟ್ರೋಫಿಯಲ್ಲಿ ಎಲ್ಲಾ ತಂಡಗಳು ಗುಂಪು ಹಂತದಲ್ಲಿ 10-10 ಪಂದ್ಯಗಳನ್ನು ಆಡುತ್ತವೆ. ಆ ನಿಟ್ಟಿನಲ್ಲಿ ಅಭಿನವ್ ಮನೋಹರ್ ಸಾರಥ್ಯದ ಶಿವಮೊಗ್ಗ ಲಯನ್ಸ್ ತಂಡ ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ. ಇದಾದ ಬಳಿಕ ಸೆಮಿಫೈನಲ್ ತಲುಪಿ ನಂತರ ಫೈನಲ್ ತಲುಪಿದರೆ ಒಟ್ಟು 4 ಪಂದ್ಯಗಳು ನಡೆಯಲಿವೆ. ಒಂದು ವೇಳೆ ಈ ಪಂದ್ಯದಲ್ಲೂ ಅವರು ಮಿಂಚಿದರೆ, ಮಹಾರಾಜ ಟಿ20 ಟ್ರೋಫಿಯ ಪ್ರಸಕ್ತ ಋತುವಿನಲ್ಲಿ ಅಭಿನವ್ ಮನೋಹರ್ ಅರ್ಧ ಶತಕಗಳ ಸಂಖ್ಯೆ ದಾಟಬಹುದು.

 

ಇಲ್ಲಿಯವರೆಗೆ ಅಭಿನವ್ ಮನೋಹರ್ 8 ಪಂದ್ಯಗಳಲ್ಲಿ 36 ಸಿಕ್ಸರ್‌ʼಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕರುಣ್ ನಾಯರ್ ಇಷ್ಟೇ ಪಂದ್ಯಗಳಲ್ಲಿ 18 ಸಿಕ್ಸರ್ ಬಾರಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಮನೋಜ್ ಭಾಂಡಗೆ 17 ಸಿಕ್ಸರ್‌ ಬಾರಿಸಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link