‘ಜೀವನದಲ್ಲಿ ನಾನು ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’ : ಸುದೀಪ್‌

Mon, 08 Jul 2024-4:27 pm,

ಸುದೀಪ್ ಅವರಿಗೆ ಈ ಇಬ್ಬರು ಸ್ಫೂರ್ತಿಯಂತೆ. ಅವರ ನೆಚ್ಚಿನ ಹೀರೋ ಯಾರು? ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ. 

ಯೂಟೂಬ್‌ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿದ್ದಾರೆ.

ಇದೇ ವೇಳೆ ಅವರ ನೆಚ್ಚಿನ ಕಲಾವಿದರು ಯಾರು ಎಂಬ ಪ್ರಶ್ನೆಗೆ ಸುದೀಪ್‌ ಉತ್ತರಿಸಿದ್ದಾರೆ. "ನನ್ನ ನೆಚ್ಚಿನ ಹೀರೋ ವಿಷ್ಣು ಸರ್. ಇದನ್ನು ಸಾಕಷ್ಟು ಬಾರಿ ಅನೇಕ ಕಡೆ ಹೇಳಿಕೊಂಡಿದ್ದೇನೆ" ಎಂದಿದ್ದಾರೆ.

"ಜೀವನದಲ್ಲಿ ನಾನು ಇಬ್ಬರಿಗೆ ಮಾತ್ರ ಬಾಸ್ ಅನ್ನೋದು. ನಮ್ಮ ತಂದೆಗೆ ಹಾಗೂ ವಿಷ್ಣು ಸರ್‌ಗೆ ಮಾತ್ರ ಬಾಸ್‌ ಅನ್ನೋದು. ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ" ಎಂದಿದ್ದಾರೆ.  

"ವಿಷ್ಣು ಸರ್ ಗತ್ತು, ಇರೋ ರೀತಿ ನನಗೆ ತುಂಬಾ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್" ಎಂದು ಸುದೀಪ್‌ ಹೇಳಿಕೊಂಡಿದ್ದಾರೆ. 

ಸುದೀಪ್ ಸದ್ಯ ʻಮ್ಯಾಕ್ಸ್ʼ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಮ್ಯಾಕ್ಸ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರವೇ ರಿಲೀಸ್ ಡೇಟ್ ಕೂಡ ಅನೌನ್ಸ್‌ ಆಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link