ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಭಿಷೇಕ್ ಅಂಬರೀಷ್ ಮನೆಯಲ್ಲಿ ಹಬ್ಬದ ವಾತಾವರಣ..? ಶೀಘ್ರವೇ ಆಗಲಿದೆಯಾ ಜೂನಿಯರ್ ಅಂಬಿಯ ಆಗಮನ..?
ಸ್ಯಾಂಡಲ್‌ವುಡ್‌ನ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಅಂಬರೀಷ್ ಪುತ್ರ ಹಾಗೂ ಸೊನೆ ಅವಿವಾ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ವಾರವೇ ಅವಿವಾ ಅವರ ಸಿಮಂತ ಕಾರ್ಯಕ್ರಮವನ್ನು ಕುಟುಂಬದವರು ಪ್ಲಾನ್ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಜೂನ್ 05, 2023 ರಂದು ದಾಂಪತ್ಯಕ್ಕೆ ಕಾಲಿಟ್ಟರು. ಈ ಜೋಡಿಯ ಮದುವೆಗೆ ಸ್ಯಾಂಡಲ್‌ವುಡ್‌ನ ತಾರಾಗಣ ಸಾಕ್ಷಿಯಾಗಿತ್ತು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಜೋರಾಗಿ ಸದ್ದು ಮಾಡುತ್ತಿರುವುದೇನೋ ನಿಜ, ಆದರೆ ಕುಟುಂಬದವರೇ ಆಗಲಿ. ಅಭಿಷೇಕ್-ಅವಿವಾ ಜೋಡಿಯೇ ಆಗಲಿ ಈ ಕುರಿತು ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.
ಸದ್ಯಕ್ಕೆ ಮುಂಬರುವ ಚಿತ್ರಕ್ಕಾಗಿ ಕಿಕ್ ಬಾಕ್ಸಿಂಗ್ ಕಲೆಯಲು ಅಭಿಷೇಕ್ ಅಂಬರೀಷ್ ವಿದೇಶಕ್ಕೆ ಹಾರಿದ್ದು, ನಾಳೆ ಅಂದರೆ ಶುಕ್ರವಾರ ತಮ್ಮ ಮನೆಗೆ ನಿವಾಸಕ್ಕೆ ಮರಲಲಿದ್ದಾರೆ. ಅಭಿಷೇಕ್ ವಿದೇಶದಿಂದ ಬರುತ್ತಿದ್ದಂತೆ ತಮ್ಮ ನಿವಾಸದಲ್ಲಿ ಅದ್ದೂರಿಯಾಗಿ ಸೀಮಂತ ಮಾಡಲು ಕುಟುಂಬದವರು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದೆ.
ಸದ್ಯಕ್ಕೆ ದಂಪತಿ ಪೋಷಕರಾಗುತ್ತಿರುವ ಈ ಗಾಳಿ ಸುದ್ದಿಯನ್ನು ಕೇಳಿ ಫ್ಯಾನ್ಸ್ ಪೂಲ್ ಖುಷಿಯಾಗಿದ್ದು, ಈ ವದಂತಿ ನಿಜವಾಗಿರಬೇಕೆಂದು ಪ್ರಾರ್ಥಿಸುತ್ತಿದ್ದಾರೆ. ಇನ್ನೂ ಕುಟುಂಬದವರು ಅಧಿಕೃತವಾಗಿ ಈ ಬಗ್ಗೆ ಬಹಿರಂಗ ಪಡಿಸಿದಾಗಲೇ ಈ ಎಲ್ಲಾ ವದಂತಿಗಳಿಎ ತೆರೆ ಬೀಳಲಿದೆ.