ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ-ಅಭಿಷೇಕ್ ಬಚ್ಚನ್...! ವಿಚ್ಛೇದನ ವದಂತಿ ಮಧ್ಯೆ ಕೋರ್ಟ್ ಮೊರೆ ಹೋಗಿದ್ದೇಕೆ ಜೋಡಿ... ಹೆಚ್ಚಾಯ್ತು ಫ್ಯಾನ್ಸ್ ಆತಂಕ!
ತಾಯಿ-ಮಗಳು ಇಬ್ಬರನ್ನೂ ಕಂಡ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಅಬುಧಾಬಿಯಲ್ಲಿ ನಡೆದಿದ್ದ IIFA ನಲ್ಲಿ ಐಶ್ವರ್ಯಾಗೆ ಆಕೆಯ ತಾಯ್ತನದ ಬಗ್ಗೆ ಪ್ರಶ್ನೆ ಕೇಳಲಾಯಿತು.
ಐಶ್ವರ್ಯಾ ರೈ ತನ್ನ ಮಗಳು ಆರಾಧ್ಯರನ್ನು ಪೋಷಣೆ ಮಾಡುತ್ತಿರುವ ಬಗ್ಗೆ ಜನತೆಗೆ ಮೆಚ್ಚುಗೆ ಇದೆ. ಇನ್ನು ಈ ಸಮಾರಂಭದಲ್ಲಿ ಎನ್‌ಡಿಟಿವಿಯ ವರದಿಗಾರರು ಐಶ್ವರ್ಯಾಗೆ, ಹೆಣ್ಣುಮಕ್ಕಳ ತಾಯಂದಿರಿಗೆ ಏನು ಸಲಹೆ ನೀಡಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು.
ಈ ಪ್ರಶ್ನೆಗೆ ಐಶ್ವರ್ಯಾ, “ತಾಯ್ತನಕ್ಕೆ ರೂಲ್ ಬುಕ್ ಅಥವಾ ನೋಟ್ ಬುಕ್ ಇಲ್ಲ. ಆದ್ದರಿಂದ, ನಿಮ್ಮ ಮಗುವಿಗೆ ನೀವು ಏನು ಮಾಡುತ್ತೀರಿ ಎಂಬುದು ಉತ್ತಮ ವಿಷಯವಾಗಿರುತ್ತದೆ" ಎಂದಿದ್ದಾರೆ
ಆದರೆ ಈ ಎಲ್ಲದರ ನಡುವೆ ಕೆಲ ದಿನಗಳಿಂದ ಸದಾ ತಾಯಿ ಜೊತೆಯಲ್ಲೇ ಓಡಾಡುತ್ತಿರುವ ಮಗಳನ್ನು ಕಂಡು ಅನೇಕರು, ಆಕೆಗೆ ಶಾಲೆ ಇಲ್ಲವೇ? ತಾಯಿ ಜೊತೆ ಓಡಾಡಲೆಂದು ಶಿಕ್ಷಣ ಸ್ಥಗಿತಗೊಳಿಸಿದ್ದಾರೆಯೇ? ಎಂದೆಲ್ಲಾ ಪ್ರಶ್ನಗೆಳನ್ನು ಮಾಡಲಾಗುತ್ತಿತ್ತು. ಇಷ್ಟೇ ಸಾಲದು ಎಂಬಂತೆ, ಆರಾಧ್ಯ ಬಚ್ಚನ್ ಆರೋಗ್ಯದ ಬಗ್ಗೆಯೂ ಕೆಲವರು ಮಾತನಾಡಿದ್ದುಂಟು.
ಇನ್ನೊಂದೆಡೆ 2 ವರ್ಷಗಳ ಹಿಂದೆ 11 ವರ್ಷ ವಯಸ್ಸಿನ ಆರಾಧ್ಯ ಆರೋಗ್ಯ ಚೆನ್ನಾಗಿಲ್ಲ ಅವರು ಸಾವನ್ನಪ್ಪಿದ್ದಾರೆ ಎಂದೆಲ್ಲಾ ಕೆಟ್ಟ ಕಂಟೆಂಟ್‌ಗಳನ್ನು ತಯಾರಿಸಿ ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಲಾಗಿತ್ತು. ಈ ವಿಷಯದ ಬಗ್ಗೆ ಕೋಪಗೊಂಡಿದ್ದ ಬಚ್ಚನ್ ಫ್ಯಾಮಿಲಿ, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಸಮೇತ ದೆಹಲಿಯ ಹೈಕೋರ್ಟ್ ಮೊರೆ ಹೋಗಿದ್ದರು.
ಅದಾದ ನಂತರ ಅರ್ಜಿಯನ್ನು ಆಧರಿಸಿ ದೆಹಲಿ ಹೈಕೋರ್ಟ್ 9 ಯೂಟ್ಯೂಬ್ ಚಾನೆಲ್ಗಳ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿತ್ತು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಂಕರ್ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. ಈ ಪ್ರಕರಣದಲ್ಲಿ ಖ್ಯಾತ ವಕೀಲ ದಯನ್ ಕೃಷ್ಣನ್ ಸೇರಿದಂತೆ ಒಟ್ಟು 14 ವಕೀಲರು ಆರಾಧ್ಯ ಪರವಾಗಿ ವಾದ ಮಂಡಿಸಿದ್ದರು.
ಇದೀಗ ಮತ್ತೆ ಮಗಳ ವಿಚಾರದಲ್ಲಿ ಕಮೆಂಟ್‌ಗಳನ್ನು ಮಾಡುತ್ತಿರುವ ವಿಚಾರದ ಬಗ್ಗೆ ದಂಪತಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ತಿಳಿದುಬರಬೇಕಿದೆ.
ಇದರ ಜೊತೆಗೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಪಡೆದುಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಅಭಿಷೇಕ್ ಬಚ್ಚನ್ ಡ್ಯಾನ್ಸ್ ಮಾಡುತ್ತಿದ್ದರೆ, ಐಶ್ವರ್ಯಾ ಮತ್ತು ಆರಾಧ್ಯ ಅವರಿಗೆ ಚಿಯರ್-ಅಪ್ ಮಾಡುತ್ತಿರುವುದು ಕಂಡುಬಂದಿತ್ತು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.