ಐಶ್ವರ್ಯಾ ರೈ ಮೊದಲ ಗಂಡ ಅಭಿಷೇಕ್ ಬಚ್ಚನ್ ಅಲ್ಲ... ಇದು ಎರಡನೇ ಮದುವೆ! ಅಮಿತಾಬ್ ಬಚ್ಚನ್ ಗೂ ಗೊತ್ತಿತ್ತಂತೆ ಈ ವಿಚಾರ!!
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ 2007 ರಲ್ಲಿ ವಿವಾಹವಾದರು. ಈ ಜೋಡಿಯ ವಿವಾಹವು ಮುಂಬೈನಲ್ಲಿರುವ ಅಮಿತಾಬ್ ಅವರ ಮನೆಯಲ್ಲಿಯೇ ನಡೆಯಿತು.
ಈ ಸಮಯದಲ್ಲಿ ಅನೇಕ ವದಂತಿಗಳು ಹುಟ್ಟಿಕೊಂಡವು. ಎಲ್ಲಾ ವದಂತಿಗಳ ನಡುವೆ ಇಂದಿಗೂ ಸದ್ದು ಮಾಡುತ್ತಿರುವುದೆಂದರೆ ಅದು ಅವರ ಮೊದಲ ಮದುವೆ ವಿಚಾರ.
ಐಶ್ವರ್ಯಾ ರೈ ಮೊದಲು ಮದುವೆಯಾದದ್ದು ಅಭಿಷೇಕ್ ಬಚ್ಚನ್ ಜೊತೆ ಅಲ್ಲ ಎಂಬ ಸಂಗತಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅವರ ವಿಚ್ಛೇದನ ವದಂತಿಯ ನಡುವೆ ಈ ಹಳೆಯ ವಿಚಾರ ಮತ್ತೆ ವೈರಲ್ ಆಗುತ್ತಿದೆ.
ಐಶ್ವರ್ಯಾ ರೈ ಮೊದಲ ಮದುವೆ ವಿಚಾರವಾಗಿ ಸಂದರ್ಶನವೊಂದರಲ್ಲಿ ಅಮಿತಾಬ್ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದರು. ಆ ಸಂಗತಿ ನನಗೆ ಗೊತ್ತು. ಆದರೆ ಸತ್ಯ ಎಂದಿಗೂ ಸುಳ್ಳಾಗಲ್ಲ ಎಂದಿದ್ದರು.
ಅಭಿಷೇಕ್ ಜೊತೆ ಮದುವೆಗೂ ಮುನ್ನ ಐಶ್ವರ್ಯಾ ರೈ ವಿವಾಗ ಮರದ ಜೊತೆ ನಡೆದಿತ್ತಂತೆ. ಇದಕ್ಕೆ ಕಾರಣ ಮಂಗಳ ದೋಷವಂತೆ.
ಐಶ್ವರ್ಯಾ ರೈ ಬಚ್ಚನ್‌ಗೆ ಮಂಗಳ ದೋಷವಿದ್ದ ಕಾರಣ ಮೊದಲು ಮರದ ಜೊತೆ ಮಾಡಿಸಿದ ಬಳಿಕ ಅಭಿಷೇಕ್ ಜೊತೆ ಸಪ್ತಪದಿ ತುಳಿದರಂತೆ.
ಅಮಿತಾಬ್ ಬಚ್ಚನ್, ನಮ್ಮ ಕುಟುಂಬವು ಮೂಢನಂಬಿಕೆಯನ್ನು ನಂಬಲ್ಲ. ಮರ ಎಲ್ಲಿದೆ? ದಯವಿಟ್ಟು ನನಗೆ ತೋರಿಸಿ. ಅವಳು ಮದುವೆಯಾದ ಏಕೈಕ ವ್ಯಕ್ತಿ ನನ್ನ ಮಗ. ಸತ್ಯ ಎಂದಿಗೂ ಸುಳ್ಳಾಗಲ್ಲ ಎಂದು ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಐಶ್ವರ್ಯಾ ರೈ ಬಚ್ಚನ್ ಸಹ ಹಲವು ಸಂದರ್ಶನಗಳಲ್ಲಿ ಈ ವೈರಲ್ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಕೂಡ ಇಂತಹ ವದಂತಿಗೆ ಕಿವಿಗೊಡಬೇಡಿ ಎಂದಿದ್ದರು.