ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್
ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹರಡುತ್ತಿದೆ.ಆದರೆ ಇಲ್ಲಿಯವರೆಗೆ ಅಭಿಷೇಕ್ ಆಗಲಿ ಐಶ್ವರ್ಯ ಆಗಲಿ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.ಕುಟುಂಬ ಸದಸ್ಯರು ಕೂಡಾ ಈ ಬಗ್ಗೆ ಯಾವ ಪ್ರತಿಕ್ರಿಯೆ ಕೂಡಾ ನೀಡಿಲ್ಲ.
ಇದೀಗ ಅಭಿಷೇಕ್ ತನ್ನ ಜೀವನದ ಬಗ್ಗೆ ನೀಡಿರುವ ಹೇಳಿಕೆ ಮತ್ತೆ ಸುದ್ದಿಯಾಗುತ್ತಿದೆ.ತಮ್ಮ ತಂದೆಯ ಬಗ್ಗೆ ಅಭಿಷೇಕ್ ಹೇಳಿರುವ ಮಾತು ಈಗ ಚರ್ಚೆಯ ವಸ್ತು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮನದ ಮಾತನ್ನು ಹೊರಹಾಕಿದ್ದಾರೆ. ಅಭಿಷೇಕ್ ಮನಸ್ಸಿನಲ್ಲಿ ಯಾವ ರೀತಿಯ ಒತ್ತಡ ಇತ್ತು ಎನ್ನುವುದನ್ನು ಹೇಳಿದ್ದಾರೆ.
ನಾನು ಅಮಿತಾಬ್ ಬಚ್ಚನ್ ಮಗ ಎನ್ನುವ ಕಾರಣಕ್ಕೆ ಯಾರು ಕೂಡಾ ತನ್ನನ್ನು ಲಾಂಚ್ ಮಾಡಲು ಸಿದ್ದರಿರಲಿಲ್ಲ.ಮೊದಲ ಸಿನಿಮಾಗೇ ಬಹಳ ಕಷ್ಟ ಪಡಬೇಕಾಯಿತು. ವೃತ್ತಿ ಜೀವನ ಆರಂಭಿಸುವುದಕ್ಕೆ ಇಷ್ಟೆಲ್ಲಾ ಕಷ್ಟ ಪಟ್ಟಿರುವುದು ಅಮಿತಾಬ್ ಪುತ್ರ ಎನ್ನುವ ಕಾರಣದಿಂದಲೇ ಎನ್ನುತ್ತಾರೆ ಅಭಿಷೇಕ್.