ಗಂಡು ಮಗುವಿನ ಪೋಷಕರಾದ ಅಭಿಷೇಕ್ - ಅವಿವಾ ನಡುವಿರುವ ವಯಸ್ಸಿನ ಅಂತರವೆಷ್ಟು ಗೊತ್ತಾ?
ಅಭಿಷೇಕ್ ಅಂಬರೀಷ್ ಪತ್ನಿ ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ಪೋಷಕರಾದ ಅಭಿಷೇಕ್ - ಅವಿವಾ ನಡುವಿರುವ ವಯಸ್ಸಿನ ಅಂತರ ಎಷ್ಟು ತಿಳಿಯೋಣ...
ಅಭಿಷೇಕ್ ಅಂಬರೀಷ್ ಪತ್ನಿ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣ ಅಂಬಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಇಂದು ನವೆಂಬರ್ 12 ರಂದು ಗಂಡು ಮಗು ಜನಿಸಿದ್ದು ಅಂಬರೀಷ್ ಮತ್ತೆ ಹುಟ್ಟಿ ಬಂದರು ಎಂದು ಜನರು ಸಂತಸ ಪಡುತ್ತಿದ್ದಾರೆ.
ಮಗುವನ್ನು ತೋಳಲ್ಲಿ ಬಿಗಿದಪ್ಪಿರುವ ಸುಮಲತಾ ಅಂಬರೀಷ್ ಅವರ ಫೋಟೋ ವೈರಲ್ ಆಗುತ್ತಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.
2023 ರಲ್ಲಿ ಅವಿವಾ ಹಾಗೂ ಅಭಿಷೇಕ್ ಮದುವೆಯಾದರು. ಅವಿವಾ ಸಖತ್ ಡಿಮ್ಯಾಂಡ್ ಇರುವ ಫ್ಯಾಷನ್ ಡಿಸೈನರ್ ಮತ್ತು ಅಭಿಷೇಕ್ ಸ್ಯಾಂಡಲ್‌ವುಡ್ ನಟ.
ಅಭಿಷೇಕ್ ಅಂಬರೀಷ್ 1993 ರಲ್ಲಿ ಜನಿಸಿದ್ದಾರೆ. ಅವಿವಾ ಬಿದ್ದಪ್ಪ ಅವರು 1991 ರಲ್ಲಿ ಜನಿಸಿದ್ದಾರೆ. ಇಬ್ಬರ ನಡುವೆಯೂ ಎರಡು ವರ್ಷಗಳ ವಯಸ್ಸಿನ ಅಂತರವಿದೆ.
ಅಭಿಷೇಕ್ ಮತ್ತು ಅವಿವಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗುತ್ತದೆ. ಪತ್ನಿ ಅವಿವ ಅವರು ಅಭಿಷೇಕ್ ಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಹೇಳಲಾಗುತ್ತಿದೆ.