Bollywood Stars: ಗರ್ಭಪಾತ, ಪತಿಗೆ ಅಕ್ರಮ ಸಂಬಂಧ, ಕೋರ್ಟ್-ಕೇಸ್! ಈ ನಟಿಯರು ಎದುರಿಸಿದ ಕಷ್ಟ ಒಂದಲ್ಲ.. ಎರಡಲ್ಲ

Thu, 06 Apr 2023-6:44 pm,

ಬಾಲಿವುಡ್ ಸಿನಿರಂಗ ಎಂಬುದು ಒಂದು ಮಾಯಾಲೋಕವಿದ್ದಂತೆ. ನೋಡಿದ್ದು ನೋಡಿದಂತಿರದ ಪ್ರಪಂಚ ಅದು. ಸ್ಟಾರ್’ಗಳು ನೋಡಲು ಭರ್ಜರಿಯಾಗಿ ರೆಡಿಯಾಗಿ ಸ್ಟೈಲಿಶ್ ಆಗಿ ಕಂಡರೂ ಸಹ, ಅವರ ಖಾಸಗಿ ಬದುಕು ಸಾಮಾನ್ಯರಿಗಿಂತ ಘೋರವಾಗಿರುತ್ತದೆ. ಇದಕ್ಕೆ ಕೆಲ ಪುರಾವೆಗಳನ್ನು ನಾವಿಂದು ಹೇಳಲಿದ್ದೇವೆ.

ತಾಯ್ತನ ಎಂಬುದು ಪ್ರತಿ ಮಹಿಳೆಗೂ ಅತ್ಯಂತ ಮಹತ್ವದ ಸಂದರ್ಭ. ಈ ಸಮಯದಲ್ಲಿ ಹೆಣ್ಣಿನ ಜೀವನ ಬಹಳಷ್ಟು ಬದಲಾಗುತ್ತದೆ. ಪ್ರತೀ ಹೆಣ್ಣು ತನ್ನ ವೈವಾಹಿಕ ಜೀವನದಲ್ಲಿ ಈ ಸಂತೋಷವನ್ನು ಅನುಭವಿಸಲು ಇಚ್ಛಿಸುತ್ತಾಳೆ. ಆದರೆ  ತಾಯಿಯಾಗಲು ಬಯಸಿದರೂ ಕೆಲವರು ಅನೇಕ ಸಮಸ್ಯಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆಗಳನ್ನು ಬಾಲಿವುಡ್ ನಟಿಯರೂ ಕೂಡ ಅನುಭವಿಸಿದ್ದಾರೆ.

ಕರಾವಳಿ ಬ್ಯೂಟಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ಮದುವೆಯಾದ ಸುಮಾರು ಮೂರು ವರ್ಷಗಳ ನಂತರ, ಶಿಲ್ಪಾ ತನ್ನ ಮಗ ವಿಯಾನ್‌’ಗೆ ಜನ್ಮ ನೀಡಿದರು, ಆ ಬಳಿಕ ಮತ್ತೆ ತಾಯಿಯಾದರೂ ಸಹ ಗರ್ಭಪಾತದ ನೋವನ್ನು ಅನುಭವಿಸಿದರು, ಹೀಗಾಗಿ ಬಾಡಿಗೆ ತಾಯ್ತನದ ಮೂಲಕ ಮತ್ತೆ ತಾಯಿಯಾದರು. ಇದರ ರಾಜ್ ಕುಂದ್ರಾ ವಿರುದ್ಧ ನೀಲಿ ಚಿತ್ರ ಮಾಡಿದ ಆರೋಪವೂ ಕೇಳಿಬಂದಿತ್ತು. ಇವೆಲ್ಲದರ ಜೊತೆ ಶಿಲ್ಪಾ ತಾಯಿ ವಿರುದ್ಧ ವಂಚನೆ ಕೇಸ್ ಕೂಡ ದಾಖಲಾಗಿತ್ತು. .

ಬಾಲಿವುಡ್ ನಟಿ, ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಕೂಡ ಇಂತಹ ನೋವನ್ನು ಅನುಭವಿಸಿದ್ದಾರೆ. ಇಂದು ಗೀತಾ ಎರಡು ಮಕ್ಕಳ ತಾಯಿ. ಆದರೆ ಇದಕ್ಕೂ ಮೊದಲು ಒಂದಲ್ಲ ಎರಡು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದಾರೆ.

ಅಮೀರ್ ಮತ್ತು ಕಿರಣ್ 2005 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2009 ರಲ್ಲಿ ಕಿರಣ್ ಗರ್ಭಿಣಿಯಾದರು. ಆದರೆ ಕೆಲವೇ ತಿಂಗಳಲ್ಲಿ ಗರ್ಭಪಾತದಿಂದ ಮಗುವನ್ನು ಕಳೆದುಕೊಂಡರು. ಇದಾದ ಬಳಿಕ ವಿಚ್ಛೇದನ ಕೂಡ ಪಡೆದುಕೊಂಡರು.

1999ರಲ್ಲಿ ನಟ ಅಜಯ್ ದೇವಗನ್ ಅವರನ್ನು ನಟಿ ಕಾಜಲ್ ಮದುವೆಯಾದರು. 2001ರಲ್ಲಿ ಪೋಷಕರಾಗಲು ನಿರ್ಧರಿಸಿದರು. ಆದರೆ ಗರ್ಭಿಣಿಯಾದ ಬಳಿಕ ಕಾಜಲ್’ಗೆ ಗರ್ಭಪಾತವಾಯಿತು. ಆರು ವಾರಗಳ ನಂತರ ಅವರು ತನ್ನ ಮಗುವನ್ನು ಕಳೆದುಕೊಂಡರು.

ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್’ಗೆ ಮೂವರು ಮಕ್ಕಳಿದ್ದಾರೆ. ಆದರೆ ಗೌರಿ ಅವರ ಮೊದಲ ಮಗು ಆರ್ಯನ್ ಹುಟ್ಟುವ ಮೊದಲೇ ಅವರಿಗೆ ಗರ್ಭಪಾತವಾಗಿತ್ತು ಎಂದು ಹೇಳಲಾಗಿದೆ. ಇದರ ಜೊತೆ, ಪತಿ ಶಾರುಖ್ ಖಾನ್ ಡಾನ್ ಸಿನಿಮಾ ನಂತರ ಪ್ರಿಯಾಂಕಾ ಚೋಪ್ರಾ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾರಿಸಿದ್ದರು ಗೌರಿ.

ನಟಿ ಮಹಿಮಾ ಚೌಧರಿ ಕೂಡ ಗರ್ಭಪಾತಕ್ಕೆ ಒಳಗಾಗಿದ್ದರು. ದಾಂಪತ್ಯದಲ್ಲಿನ ಸಮಸ್ಯೆಗಳಿಂದಾಗಿಯೇ ಎರಡು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದೆ ಎಂದು ಮಹಿಮಾ ಅವರೇ ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link