ರಾತ್ರಿ AC ಬಳಸುವಾಗ ಸೀಲಿಂಗ್ Fan ಹಾಕ್ತೀರಾ..? ತಪ್ಪದೇ ಈ ವಿಚಾರ ತಿಳಿದುಕೊಳ್ಳಿ
ಬೇಸಿಗೆ ಕಾಲ ಆರಂಭವಾಗಿದ್ದು, ಸೂರ್ಯ ಶಾಖಕ್ಕೆ ಮನೆಬಿಟ್ಟು ಹೊರ ಹೋಗಲು ಜನರ ಹಿಂದೇಟು ಹಾಕುತ್ತಿದ್ದಾರೆ. ದುಡ್ಡು ಖರ್ಚಾದರೂ ಚಿಂತೆಯಿಲ್ಲ ಅಂತ ಮನೆಯಲ್ಲಿ ಎಸಿ ಹಾಕಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನರು ಎಸಿಗಳನ್ನು ಹೆಚ್ಚು ಬಳಸುತ್ತಿದ್ದಾರೆ. ನಗರದ ಮನೆಗಳಲ್ಲಿರುವಂತೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಎಸಿ ಬಳಕೆ ಹೆಚ್ಚಾಗಿದೆ
ಅನೇಕ ಜನರು ಎಸಿ ಮತ್ತು ಸೀಲಿಂಗ್ ಫ್ಯಾನ್ ಎರಡನ್ನೂ ಒಟ್ಟಿಗೆ ಬಳಸುತ್ತಾರೆ. ಕೆಲವರು ಎಸಿ ಬಳಸುವಾಗ ಸೀಲಿಂಗ್ ಫ್ಯಾನ್ ಬಳಸಬಾರದು ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ.
ಫ್ಯಾನ್ ಮತ್ತು AC ಅನ್ನು ಒಟ್ಟಿಗೆ ಬಳಸುವಾಗ, ಕೋಣೆಯಲ್ಲಿನ ಬಿಸಿ ತಾಪಮಾನ ತ್ವರಿತವಾಗಿ ಕರಗಿ ತಕ್ಷಣವೇ ಕೊಠಡಿಯನ್ನು ತಂಪಾಗಿಸುವುದನ್ನು ನೀವು ಗಮನಿಸಿರಬಹುದು.
ಆದರೆ AC ಯೊಂದಿಗೆ ಫ್ಯಾನ್ ಬಳಸುವಾಗ ಎಸಿ ತಾಪಮಾನ 18 ಅಥವಾ 20 ಡಿಗ್ರಿಗಳಲ್ಲಿ ಇರಿಸುವ ಅಗತ್ಯವಿಲ್ಲ. 24 ನಲ್ಲಿ ಇರಿಸಿದರೆ ಸಾಕು, ರೂಮ್ ತಂಪಾಗುತ್ತದೆ.
ಎಸಿ ಮತ್ತು ಫ್ಯಾನ್ ಹಚ್ಚಿ ಇಡುವುದರಿಂದ ನಿಮ್ಮ ವಿದ್ಯುತ್ ಬಿಲ್‌ನಲ್ಲಿ ನೀವು ಶೇಕಡಾ 12-20 ರಷ್ಟು ಉಳಿಸಬಹುದು.