ಲಂಡನ್ʼನಲ್ಲಿದ್ರೂ ಮಗಳನ್ನು ಭಾರತದ ಈ ಶಾಲೆಗೆ ಅಡ್ಮಿಶನ್ ಮಾಡಿಸಿದ ವಿರಾಟ್! ನರ್ಸರಿ ಸೇರಿದ ವಾಮಿಕಾ ಸ್ಕೂಲ್ ಫೀಜ್ ಎಷ್ಟು? ಆ ಶಾಲೆ ಯಾವುದು ಗೊತ್ತಾ?
ಸದ್ಯ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಡನ್ʼನಲ್ಲಿ ವಾಸವಾಗಿದ್ದಾರೆ. ಸಾಮಾನ್ಯ ಜನರಂತೆ ಜೀವನ ಸಾಗಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಇತ್ತೀಚೆಗೆ ವಿರಾಟ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಆದರೆ ಈ ಎಲ್ಲದರ ಮಧ್ಯೆ ವಿರಾಟ್ ಮತ್ತು ಅನುಷ್ಕಾ ತಮ್ಮ ಮಗಳು ವಾಮಿಕಾ ಕೊಹ್ಲಿಯನ್ನು ಭಾರತದ ಈ ಒಂದು ಪ್ರತಿಷ್ಠಿತ ಶಾಲೆಗೆ ಅಡ್ಮಿಶನ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಮಿಕಾ ವಿದ್ಯಾಭ್ಯಾಸಕ್ಕಾಗಿ ಮುಂಗಡ ದಾಖಲಾತಿಯನ್ನೇ ದಂಪತಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ಲೈಫ್ ಹೊಸ ವರದಿಯ ಪ್ರಕಾರ, ಇತ್ತೀಚೆಗಷ್ಟೇ ಮೂರು ವರ್ಷಕ್ಕೆ ಕಾಲಿಟ್ಟಿರುವ ವಾಮಿಕಾ ಶೀಘ್ರದಲ್ಲೇ ಶಾಲೆಗೆ ಸೇರಲಿದ್ದಾರೆ. ಮುಂಬೈನ ಹೆಸರಾಂತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ʼನಲ್ಲಿ ನರ್ಸರಿಗೆ ದಾಖಲಾಗಲಿದ್ದಾರೆ ಎಂದು ಹೇಳಲಾಗಿದೆ.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಅಮೀರ್ ಖಾನ್ ಮತ್ತು ಕಿರಣ್ ರಾವ್, ಶಾರುಖ್ ಖಾನ್ ಮತ್ತು ಗೌರಿ ಖಾನ್, ಹೃತಿಕ್ ರೋಷನ್ ಮತ್ತು ಇತರ ಸೆಲೆಬ್ರಿಟಿಗಳ ಮಕ್ಕಳು ಇದೇ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ʼನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದ ವಿರಾಟ್, "ಲಂಡನ್ʼನಲ್ಲಿ ಸೆಲೆಬ್ರಿಟಿಯಲ್ಲದ ಜೀವನಶೈಲಿಯನ್ನು ಅನುಭವಿಸುತ್ತಿದ್ದೇನೆ" ಎಂದು ಸಂತೋಷವನ್ನು ಹಂಚಿಕೊಂಡಿದ್ದರು.
ಅಂದಹಾಗೆ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ʼನಲ್ಲಿ ಫೀಜ್ ಸ್ಟ್ರಕ್ಚರ್ ಕೊಂಚ ದುಬಾರಿಯೇ ಇದೆ. ಇಲ್ಲಿ ಎಲ್ ಕೆ ಜಿಗೆ 1.7 ಲಕ್ಷ ಫೀಜ್ ಇದ್ದು ಜಗತ್ತಿನ ಅತ್ಯದ್ಭುತ ಶಿಕ್ಷಣವನ್ನು ಮಕ್ಕಳಿಗೆ ಇಲ್ಲಿ ನೀಡಲಾಗುತ್ತದೆ.