ರಾತ್ರಿ ವೇಳೆ ಪುರುಷರು ಗೂಗಲ್‌ʼನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಈ ವಿಷಯವನ್ನಂತೆ!

Fri, 09 Aug 2024-5:09 pm,
most searched topic by men

ಪ್ರತಿಯೊಬ್ಬರೂ ಬಳಸುವ ವೇದಿಕೆ. ಈ ವೇದಿಕೆಯ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇನ್ನು ಇದರಲ್ಲಿ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡಿದರೂ ಸಹ, ಸಮೀಕ್ಷೆಗಳು ಮತ್ತು ವರದಿಗಳಿಗಾಗಿ ಬಳಸಲಾಗುವ ಬಹಳಷ್ಟು ಡೇಟಾವನ್ನು ಉಳಿಸಲಾಗುತ್ತದೆ.

 

most searched topic by men

ಅಂದಹಾಗೆ ಈ ವರದಿಯಲ್ಲಿ ಗೂಗಲ್‌ʼನಲ್ಲಿ ಪುರುಷರು ರಾತ್ರಿ ವೇಳೆ ಅತಿ ಹೆಚ್ಚು ಸರ್ಚ್‌ ಮಾಡುವ ವಿಚಾರ ಏನೆಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

 

most searched topic by men

'From-Mars.com' ವರದಿಯ ಪ್ರಕಾರ, ಪುರುಷರು Google ನಲ್ಲಿ ಹೆಚ್ಚು ಹುಡುಕುವ ವಿಷಯವೆಂದರೆ ಲೈಂಗಿಕತೆ. ವರದಿಯ ಪ್ರಕಾರ, ಪ್ರತಿ ವರ್ಷ ಸುಮಾರು 68 ಸಾವಿರ ಪುರುಷರು ತಾವು ಲೈಂಗಿಕತೆಯಲ್ಲಿ ದುರ್ಬಲರೇ ಎಂಬ ವಿಚಾರದ ಬಗ್ಗೆ ಹುಡುಕುತ್ತಾರೆ. ಇದಲ್ಲದೇ ಶೇವ್ ಮಾಡುವುದರಿಂದ ಗಡ್ಡದ ಕೂದಲು ಹೆಚ್ಚು ಬೆಳೆಯುತ್ತದೆಯೋ ಇಲ್ಲವೋ ಮತ್ತು ಗಡ್ಡ ದಪ್ಪವಾಗಲು ಏನು ಪರಿಹಾರ ಮಾಡಬೇಕೆಂಬುದನ್ನು ಗೂಗಲ್‌ʼನಲ್ಲಿ ಸರ್ಚ್‌ ಮಾಡುತ್ತಾರೆ.

ಇದಷ್ಟೇ ಅಲ್ಲದೆ, ಕ್ಯಾಪ್ ಧರಿಸುವುದರಿಂದ ಕೂದಲಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ಪುರುಷರು ಸರ್ಚ್‌ ಮಾಡುತ್ತಾರೆ. ವರ್ಕೌಟ್ ದಿನಚರಿ, ದೇಹದಾರ್ಢ್ಯವನ್ನು ಹೇಗೆ ಮಾಡಬೇಕು ಮತ್ತು ಯಾವ ಪ್ರೊಟೀನ್ ಶೇಕ್ ಕುಡಿಯಬೇಕು, ಇವೆಲ್ಲವೂ ಹುಡುಗರ ಗೂಗಲ್ ಹುಡುಕಾಟದಲ್ಲಿ ಸೇರಿದೆ.

 

ಈ ವರದಿಯಲ್ಲಿ ಮತ್ತೊಂದು ಆಘಾತಕಾರಿ ಅಂಶ ಕೂಡ ಬಹಿರಂಗವಾಗಿದೆ. ವರದಿಯ ಪ್ರಕಾರ, ಪುರುಷರ ಟಾಪ್ ಗೂಗಲ್ ಸರ್ಚ್‌ʼಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಸೇರಿದೆ.

 

ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ವಿಷಯ. ಆದರೆ ಹುಡುಗರು ಸಹ ಸ್ತನ ಕ್ಯಾನ್ಸರ್ ಸಂಬಂಧಿತ ಸಮಸ್ಯೆಗೆ ತುತ್ತಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಸರ್ಚ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

ಇದಲ್ಲದೆ, ಹುಡುಗರು ಕೂಡ ಗೂಗಲ್‌ʼನಲ್ಲಿ ಹುಡುಗಿಯರ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಕೆಲ ವಿಷಯವನ್ನು ಸರ್ಚ್‌ ಮಾಡಿದ್ದಾರೆ. ಈ ವರದಿಯ ಪ್ರಕಾರ, ಹುಡುಗಿಯರನ್ನು ಯಾವ ರೀತಿಯಲ್ಲಿ ಅಟ್ರ್ಯಾಕ್ಟ್‌ ಮಾಡಬಹುದು, ಅವರನ್ನು ಹೇಗೆ ಸಂತೋಷಪಡಿಸಬಹುದು, ಅವರು ಇಷ್ಟಪಡುವ ಮತ್ತು ಇಷ್ಟಪಡದಿರುವ ವಿಚಾರಗಳ ಬಗ್ಗೆ ಗೂಗಲ್‌ʼನಲ್ಲಿ ಹುಡುಕುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link