ಜಡೇಜಾ ಅಲ್ಲ... ಈ ಆಟಗಾರನೇ CSKಯ ಮುಂದಿನ ನಾಯಕ: ಧೋನಿ ಪರಮಪ್ರಿಯ ಶಿಷ್ಯನಿಗೆ ‘ಪಟ್ಟಾಭಿಷೇಕ’!
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಐಪಿಎಲ್‌ನ ಮುಂದಿನ ಋತುವಿನಲ್ಲಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದೆಲ್ಲದರ ನಡುವೆ ಅಂಬಟಿ ರಾಯುಡು ಸಿಎಸ್‌ಕೆಯ ಮುಂದಿನ ನಾಯಕ ಯಾರೆಂಬುದರ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ.
ಅಂಬಟಿ ರಾಯುಡು ಪ್ರಕಾರ, ಆರಂಭಿಕ ಬ್ಯಾಟ್ಸ್‌ಮನ್ ರಿತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ (CSK) ನ ಮುಂದಿನ ನಾಯಕರಾಗಬಹುದು. ರುತುರಾಜ್ ಗಾಯಕ್ವಾಡ್ ಕೆಲವು ಸಮಯದಿಂದ CSK ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಬಿಹೈಂಡ್‌ವುಡ್ಸ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಂಬಟಿ ರಾಯುಡು ಮಾತನಾಡಿದ್ದು, “ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯದ ಬಗ್ಗೆ ನೋಡಿದರೆ ನಾಯಕನ ಸ್ಥಾನಕ್ಕೆ ರಿತುರಾಜ್ ಸರಿಯಾದ ಆಯ್ಕೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ನಾಯಕನಾಗುವ ಸಾಮರ್ಥ್ಯ ಅವರಲ್ಲಿದೆ” ಎಂದರು.
“ಒಂದು ದಶಕಕ್ಕೂ ಹೆಚ್ಚು ಕಾಲ ಚೆನ್ನೈ ತಂಡದ ನಾಯಕನಾಗಿ ಆಡಲು ರುತುರಾಜ್ ಗಾಯಕ್ವಾಡ್ ಅವರಿಗೆ ಉತ್ತಮ ಅವಕಾಶವಿದೆ” ಎಂದು ಅಂಬಟಿ ರಾಯುಡು ನಂಬಿದ್ದಾರೆ.
ರಿತುರಾಜ್ ಗಾಯಕ್ವಾಡ್ ಅವರು ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2023 ಗಾಗಿ ಭಾರತ ತಂಡದ ನಾಯಕರಾಗಿಯೂ ನೇಮಕಗೊಂಡಿದ್ದಾರೆ.
ರಿತುರಾಜ್ ಗಾಯಕ್ವಾಡ್ ಇದುವರೆಗೆ ಟೀಂ ಇಂಡಿಯಾ ಪರ 1 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ODIಗಳಲ್ಲಿ 19 ರನ್ ಮತ್ತು T20 ನಲ್ಲಿ 16.88 ರ ಸರಾಸರಿಯಲ್ಲಿ 135 ರನ್ ಗಳಿಸಿದ್ದಾರೆ. ಇದರಲ್ಲಿ 1 ಅರ್ಧಶತಕವೂ ಸೇರಿದೆ.