ಈ ರಾಶಿಯವರು ತಪ್ಪಿಯೂ ಕಟ್ಟಬೇಡಿ ಕಪ್ಪುದಾರ... ಕೈ ಕಾಲಿಗೆ ಕಟ್ಟಿದರಂತೂ ತಪ್ಪಿದ್ದೇ ಅಲ್ಲ ಕಷ್ಟ, ಸಿರಿತನದ ಸುಪ್ಪತ್ತಿಗೆಯಲ್ಲಿರುವ ಕೋಟ್ಯಾಧೀಶನೂ ದಾರಿದ್ರ್ಯ ವಕ್ಕರಿಸಿ ಬಡವನಾಗುವ!

Thu, 24 Oct 2024-9:56 am,

ಕಪ್ಪುದಾರವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯಲು ಕಟ್ಟುತ್ತಾರೆ. ಎಲ್ಲರೂ ಕೈ ಅಥವಾ ಕಾಲಿಗೆ ಕಪ್ಪುದಾರ ಕಟ್ಟುವುದು ರೂಢಿಯಾಗಿದೆ. ಆದರೆ ಯಾವ ರಾಶಿಗಳ ಜನರು ಕಪ್ಪು ದಾರ ಧರಿಸಬಾರದು ಎಂದು ಈ ವರದಿಯಲ್ಲಿ ತಿಳಿಯೋಣ....

ವೃಶ್ಚಿಕ ರಾಶಿ - ಇವರ ಜೀವನದಲ್ಲಿರುವ ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದರಿಂದ ಹಣಕಾಸಿನ ಕೊರತೆ ಉಂಟಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟದಿಂದ ಮಾನಸಿಕ ಖಿನ್ನತೆ ಕಾಡುವುದು.

ಸಿಂಹ ರಾಶಿ - ಕಪ್ಪು ದಾರ ನೇರವಾಗಿ ಇವರ ಆತ್ಮ ವಿಶ್ವಾಸದ ಮೇಲೆಯೇ ಪರಿಣಾಮ ಬೀರುವುದು. ಹಿಡಿದ ಕೆಲಸಗಳಲ್ಲಿ ಸೋಲು ಬೆನ್ನಟ್ಟುವುದು. ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ  ಕಷ್ಟಕ್ಕೆ ಸಿಲುಕುವಿರಿ.

ಕರ್ಕಾಟಕ ರಾಶಿ - ಇವರು ಕಪ್ಪು ದಾರ ಧರಿಸಲೇಬಾರದು. ಇದು ಮಾನಸಿಕ ಶಾಂತಿಯನ್ನು ಹಾಳು ಮಾಡುವುದು. ಕೆಲಸಗಳಲ್ಲಿ ಅಡೆತಡೆ ಹೆಚ್ಚಾಗುತ್ತದೆ. ಅಂದು ಕೊಂಡ ಗುರಿ ತಲುಪುವುದು ಕಷ್ಟವಾಗುತ್ತದೆ. 

ಮೇಷ ರಾಶಿ - ಕಪ್ಪು ದಾರವನ್ನು ಈ ರಾಶಿಯ ಜನರು ತಪ್ಪಿಯೂ ಕೂಡ ಕಟ್ಟಬಾರದು. ಇದರಿಂದ ಆರ್ಥಿಕ ಸಮಸ್ಯೆ ಉದ್ಭವಿಸುವುದು. ವ್ಯಾಪಾರದಲ್ಲಿ ನಷ್ಟ ಕಾಣುವಿರಿ. ಜೀವನದಲ್ಲಿನ ಸುಖಗಳೆಲ್ಲ ಹೋಗಿ ದುಃಖದ ಸಮಯಕ್ಕೆ ದೂಡುವುದು. 

ಕಪ್ಪು ದಾರ ದೃಷ್ಟಿ ದೋಷ ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಕಪ್ಪು ದಾರವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಕಪ್ಪು ಬಣ್ಣ ಶನಿ ದೇವನೊಂದಿಗೆ ನಂಟು ಹೊಂದಿದೆ. ಹೀಗಾಗಿ 4 ರಾಶಿಯವರು ಕಪ್ಪು ದಾರವನ್ನು ಕಟ್ಟಬಾರದು.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link