Aquarium Rules: ಈ ಮೀನನ್ನು ಮನೆಯ ಅಕ್ವೇರಿಯಂನಲ್ಲಿಟ್ಟರೆ ಅದೃಷ್ಟ ಬಂಗಾರದಂತೆ ಹೊಳೆಯುತ್ತದೆ!
)
ವಾಸ್ತು ಶಾಸ್ತ್ರದಲ್ಲಿ ಈ ಅಕ್ವೇರಿಯಂಗೆ ವಿಶೇಷ ಮಹತ್ವವಿದೆ. ಮೀನನ್ನು ಗಂಗಾ ಮಾತೆ ಮತ್ತು ವರುಣದೇವನ ವಾಹನ ಎಂದು ಹೇಳಲಾಗುತ್ತದೆ. ಮೀನು ಮನೆಗೆ ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ. ಮೀನುಗಳು ನಕಾರಾತ್ಮಕತೆಯನ್ನು ಹೊರಹಾಕುತ್ತವೆ.
)
ಮನೆ ಮತ್ತು ಕಚೇರಿಯಲ್ಲಿ ಗೋಲ್ಡ್ ಫಿಶ್ ಇರಬೇಕು. ಅದೃಷ್ಟವನ್ನು ಹೆಚ್ಚಿಸಲು ಗೋಲ್ಡ್ ಫಿಶ್ ಸಹಾಯ ಮಾಡುತ್ತದೆ. ಮೀನು ನಿಮ್ಮ ಜೀವನದಲ್ಲಿ ಭಾಗ್ಯೋದಯಲ್ಲೆ ಕಾರಣವಾಗುತ್ತದೆ. ಇದರಿಂದ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.
)
ಕಪ್ಪು ಮೀನುಗಳನ್ನು ನಿಮ್ಮ ಅಕ್ವೇರಿಯಂನಲ್ಲಿಡಿ. ಕಪ್ಪು ಮೀನನ್ನು ಭದ್ರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಪ್ಪು ಮೀನು ಮನೆಯಲ್ಲಿ ಹರಡಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಮನೆಯ ಯಜಮಾನನಿಗೆ ಆಪತ್ತು ಬರದಂತೆ ಕಾಯುತ್ತದೆ.
ನಿಮ್ಮ ಮನೆ ಅಥವಾ ಕಚೇರಿಯಲ್ಲಿರುವ ಫಿಶ್ ಅಕ್ವೇರಿಯಂನಲ್ಲಿ ಕಪ್ಪು ಬಣ್ಣದ ಮೀನು ಸತ್ತರೆ, ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಆದರೆ ಕಪ್ಪು ಮೀನು ಸತ್ತಿದೆ ಎಂದು ತಿಳಿದ ತಕ್ಷಣ ಅದನ್ನು ಹೊರತೆಗೆದು ಕೊಳದಲ್ಲಿ ಬಿಡಿ. ಅದರ ಜಾಗದಲ್ಲಿ ಇನ್ನೊಂದು ಮೀನನ್ನು ಸಾಕಬೇಕು.
ವಾಸ್ತು ಪ್ರಕಾರ, ಫಿಶ್ ಅಕ್ವೇರಿಯಂ ಅನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಿ. ಮೀನುಗಳು ಎಲ್ಲಿದ್ದರೂ ಅವು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)