ಮುರಿದುಬಿತ್ತು 14 ವರ್ಷಗಳ ಒಡನಾಟ! ಮುಂಬೈ ಇಂಡಿಯನ್ಸ್ ತೊರೆದು ಈ ತಂಡ ಸೇರಲು ರೋಹಿತ್ ಶರ್ಮಾ ನಿರ್ಧಾರ!
ಈ ಬಾರಿಯ ಐಪಿಎಲ್ ಸೀಸನ್ ಮುಂಬೈ ಇಂಡಿಯನ್ಸ್ ಪರವಾಗಿಲ್ಲ. ಆರಂಭದಿಂದಲೇ ವಿವಾದ, ಮನಸ್ತಾಪ ಜೊತೆ ನಾಯಕತ್ವದ ಚರ್ಚೆಯಲ್ಲೇ ಮುಳುಗಿರುವ ಮುಂಬೈಗೆ ಇದೀಗ ಬಹುದೊಡ್ಡ ಪೆಟ್ಟು ಬೀಳುವ ವಿಷಯ ಬಹಿರಂಗವಾಗಿದೆ.
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ತೀರ ಕಳಪೆಯಾಗಿದೆ. ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ, ಬ್ಯಾಕ್ ಟು ಬ್ಯಾಕ್ ಹಿನ್ನಡೆ ಅನುಭವಿಸುತ್ತಿದೆ.
ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನಾಯಕತ್ವ ಉತ್ತಮವಾಗಿಲ್ಲ ಎಂದು ಅನೇಕರು ದೂರುತ್ತಿದ್ದಾರೆ. ಇದರ ಹೊರತಾಗಿ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ತೋರುವ ವರ್ತನೆಯನ್ನು ಅಭಿಮಾನಿಗಳು ಇಷ್ಟಪಡುತ್ತಿಲ್ಲ.
ಇತ್ತೀಚೆಗೆಯಷ್ಟೇ, ಮತ್ತೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗುತ್ತದೆ ಎಂಬ ವರದಿಗಳು ಭಾರೀ ಸುದ್ದಿಯಾಗಿತ್ತು. ಆದರೆ ಇದೀಗ ಅವೆಲ್ಲವನ್ನೂ ಮೀರಿದ ಸುದ್ದಿಯೊಂದು ಮುನ್ನಲೆಗೆ ಬಂದಿದೆ.
ಕೆಲ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಅವರ ಪ್ರಯಾಣ ಮುಂಬೈ ಇಂಡಿಯನ್ಸ್ ಜೊತೆ ಅಂತಿಮ ಹಂತದಲ್ಲಿದೆ. ಅಂದರೆ ಸುದೀರ್ಘ 14 ವರ್ಷಗಳ ಸಂಬಂಧವನ್ನು ಕೊನೆಗೊಳಿಸಲು ರೋಹಿತ್ ನಿರ್ಧರಿಸಿದ್ದಾರೆ.
ಗುಜರಾತ್ ವಿರುದ್ಧ ನಡೆದ ಪಂದ್ಯದ ವೇಳೆ ಮುಂಬೈ ತಂಡದಲ್ಲಿ ಸಮನ್ವಯದ ಕೊರತೆ ಸ್ಪಷ್ಟವಾಗಿ ಗೋಚರಿಸಿತ್ತು. ಹಾರ್ದಿಕ್ ಪಾಂಡ್ಯ ಕೋಪದಿಂದ ರೋಹಿತ್ ಶರ್ಮಾ ಅವರನ್ನು ಬೌಂಡರಿ ಕಡೆಗೆ ಕಳುಹಿಸುತ್ತಿರುವುದು ಕೂಡ ಕಂಡುಬಂದಿತ್ತು. ಈ ಎಲ್ಲಾ ವಿಡಿಯೋಗಳು ವೈರಲ್ ಆಗಿದ್ದು, ಕೋಪಗೊಂಡ ರೋಹಿತ್ ಫ್ಯಾನ್ಸ್, ಹಾರ್ದಿಕ್ ಅವರನ್ನು ಟ್ರೋಲ್ ಮಾಡಿದ್ದರು.
ಇನ್ನು ಈ ಎಲ್ಲಾ ಬೆಳವಣಿಗೆ ಬೆನ್ನಲ್ಲಿ ರೋಹಿತ್ ಶರ್ಮಾ ಮುಂದಿನ ಋತುವಿನಲ್ಲಿ ಕೆಕೆಆರ್ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಜೊತೆ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ತಂಡ ಬಿಡುವ ಬಗ್ಗೆ ಯೋಚಿಸಿದ್ದಾರೆ ಎಂಬ ವರದಿಗಳೂ ಇವೆ.
ಈ ಎಲ್ಲಾ ವಿಷಯಗಳು ಬರೀ ವರದಿಗಳಲ್ಲಿ ಬರುತ್ತಿದ್ದರೂ ಸತ್ಯಾಂಶ ಇನ್ನಷ್ಟೇ ತಿಳಿಯಬೇಕಿದೆ.