ವಿದ್ಯಾರ್ಥಿಗಳೇ... ನಾಳೆಯಿಂದ 6 ದಿನಗಳ ಕಾಲ ಕರ್ನಾಟಕದ ಎಲ್ಲಾ ಶಾಲೆ-ಕಾಲೇಜುಗಳಿಗೆ ಸರಣಿ ರಜೆ ಘೋಷಣೆ! ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?
)
ನವೆಂಬರ್ ತಿಂಗಳಲ್ಲಿ ಹಬ್ಬ ಹರಿದಿನಗಳ ಕಾರಣದಿಂದ ಶಾಲಾ ಕಾಲೇಜುಗಳಿಗೆ ಭರ್ಜರಿ ರಜೆಗಳು ನೀಡಲಾಗಿತ್ತು. ಮತ್ತೊಂದೆಡೆ ಮಳೆ ಕಾರಣದಿಂದ ಒಂದಷ್ಟು ದಿನ ಶಿಕ್ಷಣ ಸಂಸ್ಥೆಗಳು ಬಂದ್ ಆಗಿದ್ದವು. ಆದರೆ ಇದೀಗ ಮತ್ತೆ ರಜಾ ಮಜಾ ಸಿಗುವ ಸಾಧ್ಯತೆ ಇದೆ.
)
ನವೆಂಬರ್ 13ರಿಂದ ಅಂದರೆ ನಾಳೆಯಿಂದ ನವೆಂಬರ್ 18ರವರೆಗೆ ರಾಜ್ಯಾದ್ಯಾಂತ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಸಂಭವವಿದೆ. ಈ ವರ್ಷದ ಕ್ಯಾಲೆಂಡರ್ ನೋಡುವುದಾದರೆ, ನವೆಂಬರ್ 13ರಂದು ತುಳಸಿ ಪೂಜೆ ಇದೆ. ಇದು ದೀಪಾವಳಿ ನಂತರ ಆಚರಿಸಲ್ಪಡುವ ಮಹತ್ವದ ಹಬ್ಬವಾಗಿದೆ. ಈ ಕಾರಣದಿಂದಾಗಿ ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ತುಳಸಿ ಹಬ್ಬದ ದಿನದಂದು ರಜೆ ನೀಡುವ ಸಾಧ್ಯತೆ ಇದೆ.
)
ಇನ್ನು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಿದ್ದು, ಹೆಚ್ಚಿನ ಶಾಲೆಗಳಲ್ಲಿ ತರಗತಿಗಳು ನಡೆಯುವುದಿಲ್ಲ. ಬದಲಾಗಿ, ಪಠ್ಯೇತರ ಚಟುವಟಿಕೆಗಳು ನಡೆಯುತ್ತವೆ. ಇನ್ನು ನವೆಂಬರ್ 15ರಂದು ಗುರುನಾನಕ್ ಜಯಂತಿಯಿದ್ದು, ನವೆಂಬರ್ 16ರಂದು ಶನಿವಾರವಾದ ಕಾರಣ ಅರ್ಧ ದಿನ ತರಗತಿಗಳು ನಡೆಯುತ್ತವೆ.
ಇದಾದ ನಂತರ ನವೆಂಬರ್ 17ರಂದು ಭಾನುವಾರವಾಗಿದ್ದು, ಎಂದಿನಂತೆ ಸಾಮಾನ್ಯ ರಜೆ ಇರುತ್ತದೆ. ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುವ ಕಾರಣ ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ಆ ದಿನ ರಜೆ ಇರುತ್ತದೆ.
ಒಟ್ಟಾರೆಯಾಗಿ ಈ ವರ್ಷದ ಕ್ಯಾಲೆಂಡರ್ ಪ್ರಕಾರ ಕರ್ನಾಟಕ ಸೇರಿದಂತೆ ದೇಶದ ಅನೇಕ ಶಾಲಾ ಕಾಲೇಜುಗಳಲ್ಲಿ ನವೆಂಬರ್ 13 ರಿಂದ 18ರವರೆಗೆ ಸತತ ರಜೆ ಇರುತ್ತದೆ.
ಆದರೆ ಈ ರಜೆಗಳನ್ನು ನೀಡುವುದು ಆಯಾಯ ಶಿಕ್ಷಣ ಸಂಸ್ಥೆಗಳ ಆಯ್ಕೆಗೆ ಬಿಟ್ಟಿದ್ದಾಗಿದೆ ಪ್ರಸಕ್ತ ವರ್ಷದ ಕ್ಯಾಲೆಂಡರ್‌ನಲ್ಲಿ ಪ್ರಕಟವಾದ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗಿದ್ದು ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.