ನಿಮ್ಮ ಮನೆಯಲ್ಲಿ ಈ ಚಿತ್ರಗಳನ್ನಿಡಿ..ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದರೊಂದಿಗೆ ಅಪಾರ ಸಂಪತ್ತು ನಿಮ್ಮದಾಗುತ್ತದೆ!
ಅಲಂಕಾರದ ನೆಪದಲ್ಲಿ ವಸ್ತುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಇಡುತ್ತಾರೆ, ಆದರೆ ವಾಸ್ತುವಿನ ಪ್ರಾಕರ ಅದು, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಎಲ್ಲಿ ಇಡಬೇಕು ಎಲ್ಲಿ ಇಡಬಾರದು ಎಂಬುದನ್ನು ವಿವರಿಸಲಾಗಿದೆ. ಇದರಂತೆ ನೀವು ಅನುಸರಿಸಿದರೆ, ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಮಾನವ ಜೀವನದಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸಿದೆ. ವಾಸ್ತು ಪ್ರಕಾರ ಮನೆ ಕಟ್ಟುವುದಷ್ಟೇ ಅಲ್ಲ ಧನಾತ್ಮಕ ಶಕ್ತಿ ಪ್ರವಹಿಸಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಮುಖ್ಯ.
ವಿಶೇಷವಾಗಿ ಗೋಡೆಗಳ ಮೇಲೆ ನೇತಾಡುವ ಚಿತ್ರಗಳು ಮತ್ತು ಫೋಟೋಗಳ ಜಾಗದ ಕುರಿತು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಫೀನಿಕ್ಸ್ ಪಕ್ಷಿ ಚಿತ್ರ ವಾಸ್ತು ಪ್ರಕಾರ, ಮನೆಯಲ್ಲಿ ಪಕ್ಷಿಗಳ ಚಿತ್ರಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಸಿಗುವುದಿಲ್ಲ.ಆದರೆ ಹಕ್ಕಿಗಳಿರುವ ಕಡೆ ಹಿತಕರ ವಾತಾವರಣ ಇರುತ್ತದೆ ಹಿಂದೆ ಮನೆಯಲ್ಲಿ ಪಕ್ಷಿಗಳನ್ನು ಸಾಕುತ್ತಿದ್ದರು. ಆದರೆ ಈಗಿನ ಸಂದರ್ಭದಲ್ಲಿ ಪಕ್ಷಿಗಳನ್ನು ಸಾಕಲು ಸಾಧ್ಯವಿಲ್ಲ ಆದ್ದರಿಂದ ಮನೆಯಲ್ಲಿ ಪಕ್ಷಿಗಳ ಚಿತ್ರಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ವಾಸ್ತು ಪ್ರಕಾರ ಫೀನಿಕ್ಸ್ ಪಕ್ಷಿಯ ಚಿತ್ರವನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಚಿತ್ರವು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವುದಷ್ಟೆ ಅಲ್ಲದೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಲವ್ ಬರ್ಡ್ಸ್ ವಾಸ್ತು ಪ್ರಕಾರ ಲವ್ ಬರ್ಡ್ಸ್ ಪಕ್ಷಿಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಲವ್ ಬರ್ಡ್ಸ್ ಫೋಟೋಗಳನ್ನು ನೇತು ಹಾಕುವುದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಪ್ರೀತಿಯ ದೇವರು ಎಂದು ಪರಿಗಣಿಸಲಾದ ಶುಕ್ರ ಗ್ರಹಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಲವ್ ಬರ್ಡ್ಸ್ ಗ್ರಹಗಳನ್ನು ಬದಲಾಯಿಸುವ ಅಂಶವಾಗಿ ಕಾಣಬಹುದು. ಶುಕ್ರವಾರದಂದು ಮನೆಯಲ್ಲಿ ಈ ಪ್ರೇಮ ಪಕ್ಷಿಗಳ ಚಿತ್ರವನ್ನು ತಂದರೆ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ.
ಗಿಳಿಗಳ ಚಿತ್ರ ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಗಿಳಿಗಳನ್ನು ಅತ್ಯಂತ ಪವಿತ್ರ ಜೀವಿಗಳೆಂದು ಪರಿಗಣಿಸಲಾಗುತ್ತದೆ. ಹಸಿರು ಬಣ್ಣದಲ್ಲಿರುವ ಇದು ಬುಧ ಗ್ರಹದೊಂದಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ಅನೇಕ ಜನರು ಮನೆಯಲ್ಲಿ ಗಿಳಿಗಳನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಇದು ಸಾಧ್ಯವಾಗದಿದ್ದರೆ ಮನೆಯಲ್ಲಿ ಗಿಳಿಯ ಚಿತ್ರವನ್ನು ಇಟ್ಟುಕೊಂಡು ಶುಭ ಫಲಿತಾಂಶಗಳನ್ನು ಪಡೆಯಬಹುದು. ಪೂರ್ವ ದಿಕ್ಕಿನಲ್ಲಿ ಗಿಳಿಯ ಛಾಯಾಚಿತ್ರವನ್ನು ಇಡುವುದರಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.